ನಟ ಧ್ರುವ ಸರ್ಜಾರ ಗನ್​ಮ್ಯಾನ್​ನಿಂದ ಮಾಧ್ಯಮದವರ ಮೇಲೆ ಹಲ್ಲೆ! ಚಿರು ಪುಣ್ಯಸ್ಮರಣೆ ದಿನ ಆಗಿದ್ದೇನು?

chiru dhruva
Published on

ಬೆಂಗಳೂರು: ಸುದ್ದಿ ಮಾಡಲು ಹೋದ ವರದಿಗಾರರು ಮತ್ತು ಛಾಯಾಗ್ರಹಕರ ಮೇಲೆ ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ ಅವರ ಗನ್​ಮ್ಯಾನ್​ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸೋಮವಾರ ಸಂಭವಿಸಿದೆ.

ನಟ ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಒಂದು ವರ್ಷ. ಕಗ್ಗಲಿಪುರ ಬಳಿಯ ಬೃಂದಾವನ ಫಾರ್ಮ್ ಹೌಸ್ ಬಳಿ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಮಾಡಲೆಂದು ಸೋಮವಾರ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಛಾಯಾಗ್ರಾಹಕರ ಮೇಲೆ ಧ್ರುವ ಸರ್ಜಾರ ಗನ್​ ಮ್ಯಾನ್​ ಕಲ್ಲು ತೂರಿದ್ದಾರೆ.

ಧ್ರುವ ಸರ್ಜಾರ ಗನ್ಮ್ಯಾನ್
ಧ್ರುವ ಸರ್ಜಾರ ಗನ್ಮ್ಯಾನ್

ಸುದ್ದಿ ವಾಹಿನಿಯ ಕ್ಯಾಮರಾ ಮ್ಯಾನ್ ಮೇಲೆ ಕನ್ನಡ ಬಾರದ ಧ್ರುವ ಸರ್ಜಾರ ಗನ್ ಮ್ಯಾನ್​ ಹಲ್ಲೆ ಮಾಡೋಕೆ ಮುಂದಾದ ವೇಳೆ ಮಾಧ್ಯಮದವರು ಮತ್ತು ಗನ್ ಮ್ಯಾನ್ ನಡುವೆ ಮಾತಿನ ಚಕಮಕಿ ನಡೆದಿದೆ.

ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಆರೋಗ್ಯಕರವಾಗಿಯೇ ಇದ್ದ ಚಿರಂಜೀವಿ ಸರ್ಜಾ, ಜೂನ್ 7ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ನಿಧನ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net