

ಕೋಲಾರ: ಮಾಲೂರು ತಾಲೂಕಿನ ಹುಳದೇನಹಳ್ಳಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಗೂಡ್ಸ್ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ತಂದೆ-ಮಗ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಹನುಮಂತು(45) ಮತ್ತು ಇವರ ಪುತ್ರ ಭುವನ್(12) ಮೃತ ದುರ್ದೈವಿಗಳು. 14 ವರ್ಷದ ಮತ್ತೊಬ್ಬ ಮಗ ಸೇರಿ ಮೂವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ತಂದೆ-ಮಕ್ಕಳು ಕುರಿಗಳನ್ನು ಬಂಗಾರಪೇಟೆ ಶುಕ್ರವಾರದ ಸಂತೆಯಲ್ಲಿ ಮಾರಲೆಂದು ಗೂಡ್ಸ್ ವಾಹನದಲ್ಲಿ ಹೋಗುತ್ತಿದ್ದರು.
ಬಂಗಾರಪೇಟೆ ಶುಕ್ರವಾರದ ಸಂತೆಗೆ ಹೋಗಲೆಂದು ಕುರಿಗಳ ಸಮೇತ ತೊರಹಳ್ಳಿಯ ಮಾವನ ಮನೆಗೆ ಬಂದಿದ್ದ ತಂದೆ-ಮಕ್ಕಳು ಇಂದು ಬೆಳಗ್ಗೆ ಸಂತೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಚಪ್ಪಡಿ ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಕುರಿ ತುಂಬಿದ್ದ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿವೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.