27ರ ಯುವತಿಯನ್ನು ಮದ್ವೆಯಾದ 72ರ ಅಜ್ಜ! ಯುಕ್ರೇನ್​ನಿಂದ ಭಾರತಕ್ಕೆ ಬಂದು ಹಿಂದು ಪದ್ಧತಿಯಂತೆ ವಿವಾಹ |Ukrainian

Untitled design - 2025-09-20T115216.283
Published on

Ukrainian: ಸಾಮಾನ್ಯವಾಗಿ ಪ್ರೀತಿ ಕುರುಡು, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ವಾಕ್ಯವನ್ನು ಕೇಳಿರುತ್ತೇವೆ. ಹಾಗೆಯೇ ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ ಜೋಧ್‌ಪುರ ಇದಕ್ಕೆ ಸಾಕ್ಷಿಯಾಗಿದೆ.

ಹೌದು, ಇಲ್ಲಿನ ಜೋಧ್​ಪುರದಲ್ಲಿ 72 ವರ್ಷದ ಯುಕ್ರೇನಿಯನ್ ವರನೊಬ್ಬ 27 ವರ್ಷದ ವಧುವನ್ನು ಹಿಂದು ಪದ್ಧತಿಗಳ ಪ್ರಕಾರ, ಏಳು ಸುತ್ತುಗಳು, ಮಂಗಳಸೂತ್ರ ಮತ್ತು ಸಿಂಧೂರ ಸೇರಿದಂತೆ ಎಲ್ಲಾ ಸಂಪ್ರದಾಯಗಳನ್ನು ಅನುಸರಿಸಿ ವಿವಾಹವಾದರು.

72 ವರ್ಷದ ಸ್ಟಾನಿಸ್ಲಾವ್ ಮತ್ತು 27 ವರ್ಷದ ಅನ್ಹೆಲಿನಾ ಹಿಂದು ವೈದಿಕ ಆಚರಣೆಗಳ ಪ್ರಕಾರ ಏಳು ಸುತ್ತುಗಳನ್ನು ತೆಗೆದುಕೊಳ್ಳುವ ಮೂಲಕ ಜೀವನ ಸಂಗಾತಿಗಳಾಗಲು ನಿರ್ಧರಿಸಿದರು. ಇಬ್ಬರೂ ಸುಮಾರು ನಾಲ್ಕು ವರ್ಷಗಳಿಂದ ಉಕ್ರೇನ್‌ನಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು.

ಜೋಧ್​ಪುರ ಏಕೆ?

ಸ್ಟಾನಿಸ್ಲಾವ್ ಮತ್ತು 27 ವರ್ಷದ ಅನ್ಹೆಲಿನಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದಾಗ, ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಪ್ರಭಾವಿತರಾಗಿ ತಮ್ಮ ಸಂಬಂಧವನ್ನು ಹಿಂದೂ ವಿವಾಹವಾಗಿ ಪರಿವರ್ತಿಸಲು ನಿರ್ಧರಿಸಿದರು. ಜೈಪುರ ಮತ್ತು ಉದಯಪುರಕ್ಕೆ ಭೇಟಿ ನೀಡಿದ ನಂತರ, ದಂಪತಿಗಳು ತಮ್ಮ ಮದುವೆಗೆ ಜೋಧ್‌ಪುರವನ್ನು ಆಯ್ಕೆ ಮಾಡಿಕೊಂಡರು.

ಅದ್ದೂರಿ ಮದುವೆ ಆಚರಣೆ

ವರ ಸ್ಟಾನಿಸ್ಲಾವ್, ರಾಜಮನೆತನದ ಶೇರ್ವಾನಿ, ಕೇಸರಿ ಪೇಟ ಮತ್ತು ಗರಿ ಧರಿಸಿ ಕುದುರೆಯ ಮೇಲೆ ಬಂದರು. ಜೋಧ್‌ಪುರದ ಸುಂದರವಾದ ಖಾಸ್ ಬಾಗ್‌ನಲ್ಲಿ ಸಾಂಪ್ರದಾಯಿಕ ಟಿಕಾ ಸಮಾರಂಭದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ನಂತರ ವಧು-ವರರು ವರ್ಣರಂಜಿತ ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು. ವೇದ ಮಂತ್ರಗಳ ಜತೆಗೆ ವರನು ವಧುವಿನ ಹಣೆಗೆ ಸಿಂಧೂರ(ಕುಂಕುಮ) ಹಚ್ಚಿದನು. ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟಿದನು. ಇದೀಗ ದಂಪತಿಗಳ ಮದುವೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net