

6ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 13 ಲಕ್ಷ ರೂ.ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ತಂದೆ ಪೇಂಟರ್ ಅಗಿ ಕೆಲಸ ಮಾಡುತ್ತಿದ್ದು, ಸುಮಾರು ಎರಡು ವರ್ಷಗಳಿಂದೆ ಭೂಮಿ ಮಾರಾಟ ಮಾಡುವ ಮೂಲಕ ತನ್ನ ಬ್ಯಾಂಕ್ ಖಾತೆಗೆ 13 ಲಕ್ಷ ರೂ. ಜಮಾ ಮಾಡಿದ್ದರು.
ಸೋಮವಾರ, ಅವರು ತಮ್ಮ ಬ್ಯಾಂಕ್ ಖಾತೆಯ ಪಾಸ್ಬುಕ್ ಅನ್ನು ನವೀಕರಿಸಲು ಹೋದಾಗ, ಅವರ ಬ್ಯಾಂಕ್ ಖಾತೆಯಲ್ಲಿ 13 ಲಕ್ಷ ರೂ.ಗಳಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಅಘಾತಕ್ಕೊಳಾಗದ ತಂದೆ-ತಾಯಿಗೆ ತಾವು ನಿಂತಿದ್ದ ನೆಲ ಒಮ್ಮೆ ಕುಸಿದಂತಾಗಿದೆ.
ಪಾಲಕರು ಕೂಡಲೇ ಪೊಲೀಸ್ ಕಂಪ್ಲೇಟ್ ಕೊಟ್ಟು ತನಿಖೆ ನಡೆಸಿದ್ದಾರೆ. ಬಳಿಕ ಆನ್ಲೈನ್ ಆಟವಾದ ಫ್ರೀ ಫೈರ್ ಮೂಲಕ ಈ ಬೃಹತ್ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮನೆಯಲ್ಲಿ ಮಗುವನ್ನು ವಿಚಾರಿಸಿದಾಗ ಹೆದರಿ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)