ಸಪ್ತಸಾಗರ ದಾಟಿ ಪಾಕ್​ ಯುವಕನನ್ನು ಮದುವೆಯಾದ 47ರ ವಿದೇಶಿ ಮಹಿಳೆ!

Untitled design (24)
Published on

ಅಮೆರಿಕದ ಇಲಿನಾಯ್ಸ್‌ನ 47 ವರ್ಷದ ಮಿಂಡಿ ರಾಸ್ಮುಸ್ಸೆನ್, ಅಪ್ಪರ್ ದಿರ್ ಜಿಲ್ಲೆಯ ನಿವಾಸಿಯಾದ ತನ್ನ 31 ವರ್ಷದ ಫೇಸ್‌ಬುಕ್ ಪ್ರೇಮಿ ಸಾಜಿದ್ ಜೆಬ್ ಖಾನ್‌ನನ್ನು ಪ್ರೀತಿಸಿ ಮದುವೆಯಾದ ಅಚ್ಚರಿ ಘಟನೆ ಇದೀಗ ಜಗತ್ತಿನದ್ಯಾಂತ ವೈರಲ್​ ಆಗುತ್ತಿದೆ.

ತನ್ನ ಗೆಳೆಯನನ್ನು ಮದುವೆಯಾಗಲು ಅಮೆರಿಕದಿಂದ ಪಾಕಿಸ್ತಾನಕ್ಕೆ ತೆರಳಿದ ರಾಸ್ಮುಸ್ಸೆ, ಅಲ್ಲಿ ಆಕೆ ಇಸ್ಲಾಂಗೆ ಮತಾಂತರಗೊಂಡಳು. ಅಲ್ಲದೆ, ಇಬ್ಬರ ನಡುವೆ 16 ವರ್ಷ ವಯಸ್ಸಿನ ವ್ಯತ್ಯಾಸವಿದ್ದರೂ, ಜುಲೈ ಆರಂಭದಲ್ಲಿ ಅವರು ಸಾಂಪ್ರದಾಯಿಕ ನಿಕಾಹ್ ಸಮಾರಂಭದಲ್ಲಿ ವಿವಾಹವಾದರು. ಸಾಮಾಜಿಕ ಟೀಕೆಗಳನ್ನು ನಿರ್ಲಕ್ಷಿಸಿ, ದಂಪತಿಗಳ ಪ್ರೇಮಕಥೆಯು ಪ್ರಸ್ತುತ ಪ್ರಪಂಚದಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ.

ಆನ್​ಲೈನ್​(ಫೇಸ್​ಬುಕ್​) ಪರಿಚಯ

ಸಾಜಿದ್ ಜೆಬ್ ಖಾನ್‌ ಮತ್ತು ಮಿಂಡಿ ರಾಸ್ಮುಸ್ಸೆನ್ ಕಳೆದ ಒಂದು ವರ್ಷದ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯವಾಗಿತ್ತು. ಮೊದಲಿಗೆ ಅವರು ಎಲ್ಲರಂತೆ ಮಾತನಾಡುತ್ತಿದ್ದರು. ಬಳಿಕ ಪರಿಚಯ ಇಬ್ಬರ ನಡುವೆ ಗಾಢವಾಗಿ ಪ್ರೀತಿಯ ತಿರುವು ಪಡೆದುಕೊಂಡಿದೆ. ಹೀಗೆ ಇಬ್ಬರ ನಡುವೆ ಪ್ರೀತಿ ಬೆಳೆದು ಮದುವೆ ಪ್ರಸ್ತಾಪ ಮಾಡಿಕೊಂಡಿದ್ದಾರೆ.

ಈ ವಿಷಯವನ್ನು ಇಬ್ಬರು ಮನೆಯ ಕುಟುಂಬದವರು ಒಪ್ಪಿದ್ದಾರೆ. ಈ ಮೂಲಕ ಆಕೆ 90 ದಿನದ ವಿಸಾದೊಂದಿಗೆ ಪಾಕಿಸ್ತಾನಕ್ಕೆ ಬಂದಿದ್ದಾಳೆ. ಅಲ್ಲಿ ಪಾಕ್​​ನ ಸಾಜಿದ್ ಜೆಬ್ ಖಾನ್‌ ಕುಟುಂಬ ಆಕೆಯನ್ನು ಅದ್ದೂರಿಯಾಗಿ ಬರ ಮಾಡಿಕೊ0ಡಿದೆ. ಕುಟುಂಬ ಸದಸ್ಯರು ಸಹ ಅವಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು.

ಬಳಿಕ ಆಕೆ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು 'ಜುಲೇಖಾ' ಎಂದು ಬದಲಾಯಿಸಿಕೊಂಡಳು. ನಂತರ, ಅವರು ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ರಾಸ್ಮುಸ್ಸೆನ್ ತಮ್ಮ ವಿವಾಹ ಸಮಾರಂಭದ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡರು. ಈ ಪ್ರೇಮಕಥೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net