ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

Water heater
Published on

ರಾಯಚೂರು: ಹೀಟರ್​ ಬಳಸಿ ಸ್ನಾನಕ್ಕೆಂದು ನೀರು ಕಾಯಿಸುತ್ತಿದ್ದ ಯುವತಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಜಿಲ್ಲೆಯಲ್ಲಿ ಸಂಭವಿಸಿದೆ.

ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರಿನ ಕಸಬಾಲಿಂಗಸೂರಿನ ರೇಣುಕಮ್ಮ(23) ಮೃತ ದುರ್ದೈವಿ.

ಭಾನುವಾರ ಬೆಳಗ್ಗೆ ಸ್ನಾನಕ್ಕೆಂದು ರೇಣುಕಮ್ಮ ಹೀಟರ್​ನಿಂದ ನೀರು ಕಾಯಿಸುತ್ತಿದ್ದಳು. ಸ್ವಿಚ್ ಬೋರ್ಡ್ ಆಫ್​ ಮಾಡದೇ ನೀರಿನಲ್ಲಿ ಕೈ ಇಟ್ಟಿದ್ದು, ವಿದ್ಯುತ್ ಪ್ರವಹಿಸಿ ಆಕೆ ಸತ್ತಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಕರೆತಂದರಾದರೂ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net