ಶೆಟ್ಟಿಕೊಪ್ಪದಲ್ಲಿ ಮಾವಿನ ಮರ ಏರಿದ್ದ 12ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

9 nrp 4
ಎನ್.ಆರ್.ಪುರದ ಶೆಟ್ಟಿಕೊಪ್ಪದ ಮುಖ್ಯರಸ್ತೆ ಪಕ್ಕದ ಮರದಮೇಲಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗತಜ್ಞ ಪಿ.ಜಿ.ಹರೀಂದ್ರ ಹಿಡಿದಿದ್ದಾರೆ.
Published on

ಎನ್.ಆರ್.ಪುರ: ಶೆಟ್ಟಿಕೊಪ್ಪದ ಮುಖ್ಯರಸ್ತೆಯ ಪಕ್ಕದ ಕೆರೆ ಅಂಗಳದ ಸಮೀಪ ಮಾವಿನ ಮರದಲ್ಲಿ ಕಾಣಿಸಿಕೊಂಡ 12ಅಡಿ ಉದ್ದದ ಕಾಳಿಂಗ ಸರ್ಪವನ್ನು ಕುದುರೆಗುಂಡಿಯ ಉರಗತಜ್ಞ ಪಿ.ಜಿ.ಹರೀಂದ್ರ ಅವರ ಸಹಾಯದಿಂದ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಶೆಟ್ಟಿಕೊಪ್ಪದ ಮುಖ್ಯರಸ್ತೆ ಪಕ್ಕದ ಮಾವಿನ ಮರದಲ್ಲಿ ಕಾಳಿಂಗ ಸರ್ಪ ಇರುವುದನ್ನು ಕಂಡು ಉರಗ ತಜ್ಞ ಪಿ.ಜಿ.ಹರೀಂದ್ರ ಅವರನ್ನು ಕರೆಸಲಾಯಿತು. ಪಿ.ಜಿ.ಹರೀಂದ್ರ ಗ್ರಾಮಸ್ಥರ ಸಹಕಾರದಿಂದ ಕಾಳಿಂಗ ಸರ್ಪವನ್ನು ಹಿಡಿದು ಮುಖ್ಯರಸ್ತೆಯ ಪಕ್ಕದಲ್ಲೇ ನಡೆದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಮಂಜಯ್ಯ ಅವರ ಸಹಕಾರದೊಂದಿಗೆ ಅರಣ್ಯಕ್ಕೆ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net