9ರಂದು ಚಾಮುಂಡಿ ಬೆಟ್ಟ ಚಲೋ

Chamundi betta
Published on

ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಸೆ.9ರಂದು ಹಿಂದು ಜಾಗರಣಾ ವೇದಿಕೆಯಿಂದ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದೆ. ಇದರ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ದಲಿತ ಮಹಾಸಭಾವು ಸೆ.9ರಂದೇ ಚಾಮುಂಡಿ ನಡಿಗೆ ಆಯೋಜಿಸಿದೆ.

ಚಾಮುಂಡಿ ತಾಯಿಯನ್ನು ಮತ್ತು ದಸರಾ ಉದ್ಘಾಟಕರ ಆಯ್ಕೆಯನ್ನು ರಾಜಕೀಯಕ್ಕೆ ಹಾಗೂ ಕೋಮುಗಲಭೆ ಸೃಷ್ಟಿಸಲು ಬಳಸಿಕೊಳ್ಳ್ಳುತ್ತಿರುವವರ ವಿರುದ್ಧ ಚಾಮುಂಡಿ ನಡಿಗೆ ಮಾಡಲು ಅನುಮತಿ ನೀಡುವಂತೆ ದಲಿತ ಮಹಾಸಭಾ ಅಧ್ಯಕ್ಷ ಎಸ್. ರಾಜೇಶ್ ಅವರು ನಗರ ಪೊಲೀಸ್ ಆಯಕ್ತೆ ಸೀಮಾಲಾಟ್ಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ನಿಸಾರ್ ಅಹಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜಯ್ಯ ಅವರನ್ನು ಕರೆದು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆ ಎಂದು ಹೇಳಿಕೊಳ್ಳುತ್ತಿರುವವರು ಚಕಾರವೆತ್ತಿರಲಿಲ್ಲ. ಆದರೆ, ಈ ಬಾರಿ ಬಾನು ಮಸ್ತಾಕ್ ಅವರ ಆಯ್ಕೆಯನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂದು ಪ್ರಯತ್ನ ನಡೆಯುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net