9ಕ್ಕೆ ಆಯುಷ್ಮಾನ್​, ಇ-ಶ್ರಮ್​ ಕಾರ್ಡ್​ ವಿತರಣೆ

06 mlr 01
ಮಾಲೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್​ಕುಮಾರ್​, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಉಸ್ತುವಾರಿ ಎಸ್​.ಕೃಷ್ಣಾರೆಡ್ಡಿ ಇತರರು ಇದ್ದರು.
Published on

ಮಾಲೂರು: ತಾಲೂಕಿನ 39 ಸಾವಿರ ಮಂದಿಗೆ ಆಯುಷ್ಮಾನ್​ ಆರೋಗ್ಯ ಕಾರ್ಡ್​, 3500 ಇ-ಶ್ರಮ್​ ಕಾರ್ಡ್​ಗಳನ್ನು ಮಾಡಿಸಲಾಗಿದ್ದು, ಇವುಗಳನ್ನು ಜು 9ರಂದು ವಿತರಿಸಲಾಗುವುದು ಎಂದು ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್​ಕುಮಾರ್​ ತಿಳಿಸಿದರು.


ಪಟ್ಟಣದ ಬೆಂಗಳೂರು ರಸ್ತೆಯ ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಕಾರ್ಯಾಲಯದಲ್ಲಿ ಮಂಗಳವಾರ ಈ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಅರಳೇರಿ ರಸ್ತೆಯ ಶ್ರೀರಂಗಂಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 1ಗಂಟೆಗೆ ಕಾರ್ಯಕ್ರಮ ಆಯೋಜಿಸಿದ್ದು, ಫಲಾನುಭವಿಗಳು ಭಾಗವಹಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಫಲಾನುಭವಿಗಳನ್ನು ಕರೆತಂದು ನಂತರ ಅವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.


ತಾಲೂಕಿನಲ್ಲಿ ಈಗಾಗಲೇ 1ವರ್ಷದಿಂದ 23 ಗ್ರಾಪಂಗಳಲ್ಲಿ ಆಯುಷ್ಮಾನ್​, ಇ-ಶ್ರಮ ಕಾರ್ಡ್​ಗಳನ್ನು ಮಾಡಿಸಲಾಗಿದೆ. ಪುರಸಭೆಯ 17ವಾರ್ಡ್​ಗಳ ನಾಗರಿಕರಿಗೆ ಕಾರ್ಡ್​ಗಳನ್ನು ಮಾಡಿಸಲಾಗಿದ್ದು ಉಳಿದ ಪಂಚಾಯತಿಗಳಲ್ಲಿ ಹಾಗೂ ವಾರ್ಡ್​ಗಳಲ್ಲಿ ಜು 11ನಂತರ ಉಚಿತವಾಗಿ ಮಾಡಿಸಲಾಗುವುದು. ಒಟ್ಟಾರೆ ತಾಲೂಕಿನಲ್ಲಿ 2 ಲಕ್ಷ ಜನರಿಗೆ ಆಯುಷ್ಮಾನ್​ ಕಾರ್ಡ್​ಗಳನ್ನು ಮತ್ತು ಇ&ಶ್ರಮ ಕಾರ್ಡ್​ಗಳನ್ನು ಮಾಡಿಸಲಾಗುವುದೆಂದು ತಿಳಿಸಿದರು.


ತಾಲೂಕಿನಲ್ಲಿ ರಸ್ತೆಗಳು ಹಳ್ಳ ಗುಂಡಿಗಳಿಂದ ಕುಡಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ತಾಲೂಕು ಆಡಳಿತ, ಅಧಿಕಾರಿಗಳು 10 ದಿನದಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು. ನಂತರ ರಸ್ತೆ ಗುಂಡಿಗಳನ್ನು ಪಕ್ಷದ ವತಿಯಿಂದ ಮುಚ್ಚುವುದ್ದಾಗಿ ಎಚ್ಚರಿಕೆ ನೀಡಿದರು.


ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಉಸ್ತುವಾರಿ ಎಸ್​.ಕೃಷ್ಣಾರೆಡ್ಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಹಾತ್ವಾಕಾಂಕ್ಷಿಯ ಆಯುಷ್ಮಾನ್​, ಇ&ಶ್ರಮ ಕಾರ್ಡ್​ಗಳನ್ನು ಮನೆಮನೆಗೆ ತಲುಪಿಸುವ ಕೆಲಸಮಾಡುತ್ತಿರುವುದು ಶ್ಲಾಘನೀಯ ಎಂದರು.


ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಾಮಸ್ವಾಮಿ, ಬಿಜೆಪಿ ರಾಜ್ಯಪರಿಷ್ಯತ್​ ಸದಸ್ಯ ದೇವರಾಜರೆಡ್ಡಿ, ಹಿರಿಯ ಮುಖಂಡರಾದ ಬಿ.ಎನ್​.ರಾಜರಾಮ್​, ಬಿ.ಆರ್​. ವೆಂಕಟೇಶ್​, ಎಂ.ವಿ.ವೇಮನ, ಹರೀಶ್​ಗೌಡ, ಗುರುನಾಥ್​ರೆಡ್ಡಿ, ಭಾವನಹಳ್ಳಿ ಚಂದ್ರಪ್ಪ, ಭಾನುತೇಜ, ಮಿಂಡಹಳ್ಳಿ ಮುನಿರಾಜು, ಸಿ.ಎಂ.ಸಿ.ಮುನಿರಾಜು, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ರೇಣುಕಾಪ್ರಸಾದ್​, ಸುಮಾ ಮಂಜುನಾಥ್​, ಶ್ರೀವಲ್ಲಿ, ಯಶೋದಮ್ಮ ಮತ್ತಿತರರಿದ್ದರು.

ಕಾರ್ಯಕರ್ತರು ಪಕ್ಷ ಸಂಘಟನೆ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕಿನಲ್ಲಿ ಮಾಜಿ ಸಚಿವ ಎಸ್​.ಎನ್​.ಕೃಷ್ಣಯ್ಯಶೆಟ್ಟಿ ಅವರನ್ನು 55 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದು, ಅದೇ ಮತದಾರರು, ಅಭಿಮಾನ ಪಕ್ಷದ ಮೇಲೆ ಈಗಲೂ ಇದೆ. ಪಕ್ಷದ ಹೈಕಮಾಂಡ್​ ನೈಜ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ ಎಂಬ ನಂಬಿಕೆ ನನಗಿದೆ. ಟಿಕೆಟ್​ ನೀಡಿದರೆ ಗೆಲುವು ಖಚಿತ.

|ಹೂಡಿ ವಿಜಯಕುಮಾರ್​, ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net