ಉಪ ಜಾತಿ ಸಮೀಕ್ಷೆಯಲ್ಲಿ ಶೇ.96.71 ಸಾಧನೆ

dc press meet
ಕೋಲಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ಮಂಗಳಾ, ಶ್ರೀನಿವಾಸನ್​, ಅಂಬಿಕಾ ಇದ್ದರು.
Published on

ಕೋಲಾರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯು ಮೇ 24ಕ್ಕೆ ಕೊನೆಗೊಳ್ಳಲಿದ್ದು, ಇದುವರೆಗೂ ಶೇ.96.71 ಸಮೀೆ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಎಚ್​.ಎನ್​.ನಾಗಮೋಹನ ದಾಸ್​ ಏಕ ಸದಸ್ಯ ಆಯೋಗದ ನಿರ್ದೇಶನದಂತೆ ಸಮೀಕ್ಷೆ ಕೈಗೆತ್ತಿಕೊಂಡಿದ್ದು, ಆರಂಭದಲ್ಲಿ ತಾಂತ್ರಿಕ ದೋಷ ಉಂಟಾಯಿತೇ ಹೊರತು, ಸರಿ ಹೋದ ನಂತರ ಸುಗಮವಾಗಿ ಸಮೀೆ ನಡೆದಿದೆ, ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಸಮೀೆ ಕಾರ್ಯ ಮುಖ್ಯ ಘಟ್ಟ ತಲುಪಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 3,53,806 ಕುಟುಂಬಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 3,42,156 ಮನೆಗಳನ್ನು ಸಂಪರ್ಕಿಸಿ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಗೆ ಇನ್ನು ಉಳಿದಿರುವ ಕಾಲವಕಾಶದಲ್ಲಿ ಶೇ.100 ಸಾಧನೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.

2011ರ ಸಮೀಕ್ಷೆಯ ಪ್ರಕಾರ ಅಂದಾಜಿಸಲಾಗಿರುವ ಮನೆ ಮನೆಯ ಸಮೀಕ್ಷೆಯಾಗಿದೆ. ಪರಿಶಿಷ್ಟ ಜಾತಿಯ 1,10.273 ಕುಟುಂಬದ ಪೈಕಿ 98,753 ಕುಟುಂಬಗಳ ಸಮೀಕ್ಷೆ, ಇತರೆ 2,52,099 ಕುಟುಂಗಳು ಸಮೀಕ್ಷೆ ಕಾರ್ಯದಲ್ಲಿ ಒಟ್ಟು 2,44,466 ಕುಟುಂಬಗಳ ಸಮೀಕ್ಷೆ ಮುಗಿದಿದೆ. ತಪ್ಪಿ ಹೋಗಿರುವವರು ಮೇ 26, 27, 28ರಂದು ನಡೆಯುವ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ಮಾಹಿತಿ ಸಲ್ಲಿಸಬಹುದು ಎಂದರು.

ಕೋಲಾರ, ಬಂಗಾರಪೇಟೆ, ಕೆಜಿಎಫ್​ ಭಾಗದಲ್ಲಿ ಸಮೀಕ್ಷೆ ಕಾರ್ಯ ಬಾಕಿ ಉಳಿದಿದ್ದು ಬಾಕಿಯಿರುವ ಎರಡು ದಿನದಲ್ಲಿ ಮುಗಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಶೇ.100 ಸಮೀಕ್ಷಾ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದರು.

ಸಮೀಕ್ಷಾ ತಂಡವು ಮನೆ, ಮನೆಗೆ ಭೇಟಿ ಸಂದರ್ಭಧಲ್ಲಿ ಕೆಲವು ಕುಟುಂಬಗಳು ಮನೆಗೆ ಬೀಗ ಹಾಕಿರಬಹುದು, ಸ್ಥಳಾಂತರವಾಗಿರಬಹುದು ಅಥವಾ ವಲಸೆ ಹೋಗಿರಬಹುದು. ಹೀಗೆ ಅನೇಕ ಕಾರಣಗಳಿಂದ ವಿಳಂಭವಾಗಿದೆ. ಅವರಿಗೆಲ್ಲಾ ವಿಶೇಷ ಶಿಬಿರಗಳಿಗೆ ತೆರಳಿ ಮಾಹಿತಿ ನೀಡ ಬಹುದಾಗಿದೆ. ಆಯಾ ಮತಗಟ್ಟೆಗಳಿಗೆ ತೆರಳಿ ವಿವರಗಳನ್ನು ನೀಡ ಬಹುದು ಎಂದರು.

ಸಾರ್ವಜನಿಕರು, ಸಂಘಸಂಸ್ಥೆಗಳ ಮುಖಂಡರು ಸಮೀಕ್ಷಾ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಪ್ರತಿ ದಿನ ಒಂದೊಂದು ತಂಡವು 120 ರಿಂದ 150 ಮನೆಗಳ ಸಮೀಕ್ಷೆ ನಡೆಸುತ್ತಿದ್ದಾರೆ. ಯಾವೂದೇ ರೀತಿ ಸಮಯವನ್ನು ವ್ಯರ್ಥ ಮಾಡದೆ ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳಾ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಶ್ರೀನಿವಾಸನ್​, ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net