91 ವರ್ಷದ ಪತ್ನಿಯನ್ನು ಹನಿಮೂನ್​ಗೆ ಕರೆದೊಯ್ದ 23ರ ಯುವಕ! Honeymoonನಲ್ಲಿಯೇ ಹೋಯ್ತು ಈಕೆ ಪ್ರಾಣ

91yearoldwoman
Published on

ಅರ್ಜೆಂಟೀನಾ: 91 ವರ್ಷಗಳ ವೃದ್ಧೆಯನ್ನು 23 ವರ್ಷದ ಯುವಕ ವಿವಾಹವಾಗಿದ್ದನು. ಇಬ್ಬರೂ ಮದುವೆಯಾದರು. ಇತ್ತೀಚೆಗೆ ಹನಿಮೂನ್‌ಗೆ ( Honeymoon) ಹೋಗಿದ್ದರು. ವಯಸ್ಸಾದ ಹೆಂಡತಿ ಹನಿಮೂನ್‌ನಲ್ಲಿ ಸಾವನ್ನಪ್ಪಿದ್ದು, ಯುವಕನಿಗೆ ಸಂಕಷ್ಟ ಎದುರಾಗಿದೆ.

ನಡೆದಿದ್ದೇನು?: ಅರ್ಜೆಂಟೀನಾದ 23 ವರ್ಷದ ಯುವಕ ಅತ್ಯಂತ ಬಡತನದಲ್ಲಿ ವಾಸಿಸುತ್ತಿದ್ದನು. ಯುವಕನಿಗೆ ಓದಲು ಹಣವಿಲ್ಲದೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ 91ರ ಹರೆಯದ ಒಂಟಿ ಮಹಿಳೆಯೊಬ್ಬರು ನನ್ನನ್ನು ಮದುವೆಯಾದರೆ ಸಂಸಾರ ಚೆನ್ನಾಗಿರುತ್ತದೆ ಹಾಗೂ ವಿದ್ಯಾಭ್ಯಾಸದ ವೆಚ್ಚವನ್ನು ನಾನೆ ಭರಿಸುವುದಾಗಿ ಹೇಳಿದ್ದಾಳೆ.

ಯುವಕ ಹಾಗೂ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿ ಮದುವೆ ಮುಗಿಸಿದ್ದಾರೆ. ಮದುವೆಯ ನಂತರ ಅವರು ಹನಿಮೂನ್‌ಗೆ ತೆರಳಿದರು. ಹೋಟೆಲ್ ಕೊಠಡಿಯಲ್ಲಿ ತಂಗಿದ್ದ ವೇಳೆ ವೃದ್ಧೆ ಹಾಸಿಗೆಯ ಮೇಲೆಯೇ ಸಾವನ್ನಪ್ಪಿದ್ದಾರೆ.

ಮರಣದ ನಂತರ ಆಸ್ತಿಯು ನನ್ನ ಪತಿಯಾಗಿ ನಿಮಗೆ ಬರುತ್ತದೆ ಮತ್ತು ಪಿಂಚಣಿ ಕೂಡ ಬರುತ್ತದೆ ಎಂದು ಹೇಳಿದರು.

ಬಳಿಕ ವೃದ್ಧೆಯನ್ನು ಮನೆಗೆ ಕರೆತಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪತ್ನಿ ಪಿಂಚಣಿಗೆ ಅರ್ಜಿ ಸಲ್ಲಿಸಿದಾಗ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯುವಕನೇ ವೃದ್ಧೆಯನ್ನು ಕೊಂದಿರುವ ಶಂಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ತನ್ನ ವೃದ್ಧ ಪತ್ನಿ ಸಹಜ ಸಾವಿಗೀಡಾಗಿರುವುದನ್ನು ಕಾನೂನು ಹೋರಾಟದ ಮೂಲಕ ಸಾಬೀತುಪಡಿಸಿದ್ದಾನೆ. ಇದರೊಂದಿಗೆ ಜೈಲಿನಿಂದ ಪರಾರಿಯಾಗಿದ್ದಾನೆ. ಆದರೆ, ಅಧಿಕಾರಿಗಳು ಯುವಕನಿಗೆ ಪಿಂಚಣಿ ಹಣ ನೀಡಲು ನಿರಾಕರಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net