ಎಪಿಎಸ್ ಪಾಠಶಾಲೆಗೆ 90 ರ ಸಂಭ್ರಮ : ಶಿಕ್ಷಣ ತಜ್ಞ ಪ್ರೊ; ಎನ್ . ಅನಂತಾಚಾರ್ ಪ್ರತಿಮೆ ಅನಾವರಣ.

aps
Published on

ಬೆಂಗಳೂರು: ಆಚಾರ್ಯ ಪಾಠಶಾಲೆ (ಎಪಿಎಸ್)ಯ 90 ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮನಹಳ್ಳಿ ಕ್ಯಾಂಪಸ್‌ನಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರೊ.ಎನ್ . ಅನಂತಾಚಾರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

1960 ರ ದಶಕದಲ್ಲಿ ಪ್ರೊ. ಎನ್ ಅನಂತಾಚಾರ್ ಅವರು ಗ್ರಾಮೀಣ ಜನತೆಗೆ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅವರ ದೂರದೃಷ್ಟಿ ಮತ್ತು ಪ್ರಾಮಾಣಿಕತೆ ಹಾಗೂ ಶ್ರಮದ ಲ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಸಿಎ ಡಾ.ವಿಷ್ಣು ಭರತ್ ಆಲಂಪಲ್ಲಿ ಪ್ರತಿಮೆ ಅನಾವರಣಗೊಳಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಭಾರತ ಸ್ವಾತಂತ್ರ್ಯ ಪಡೆಯುವ ಹನ್ನೆರಡು ವರ್ಷಗಳ ಮೊದಲು ಕೇವಲ ಮೂವರು ವಿದ್ಯಾರ್ಥಿಗಳಿಗಾಗಿ ಶಾಲೆ ಸ್ಥಾಪಿಸಿದರು. ಗಮನಾರ್ಹವಾಗಿ, ಸೆಪ್ಟೆಂಬರ 5 ರಂದು ಅವರ ಜನ್ಮದಿನವು ಶಿಕ್ಷಕರ ದಿನಾಚರಣೆಯೊಂದಿಗೆ ಸೇರಿಕೊಳ್ಳುತ್ತದೆ, ಇದು ಶಿಕ್ಷಣಕ್ಕಾಗಿ ಅವರ ಜೀವಮಾನದ ಬದ್ಧತೆಗೆ ಸೂಕ್ತವಾದ ಗೌರವವಾಗಿದೆ. ಎಪಿಎಸ್‌ನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಎನ್.ಅನಂತಾಚಾರ್ ಕೊಡುಗೆಗಳು ಅಳೆಯಲಾಗದ ಮತ್ತು ಆಳವಾದ ಮಹತ್ವ ಹೊಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net