90 ಕೋಟಿ ಸಾಲಕ್ಕಾಗಿ 14.25 ಲಕ್ಷ ಕಳೆದುಕೊಂಡ

CYBER CRIME 8 MAY 20
Published on

ಬೆಂಗಳೂರು : ಮುದ್ರಾ ಯೋಜನೆಯಡಿ 10 ಲಕ್ಷ ರೂ. ಸಾಲ ಕೊಡಿಸುವುದಾಗಿ ಸೈಬರ್ ಕಳ್ಳರು ವ್ಯಕ್ತಿಗೆ 1.21 ಲಕ್ಷ ರೂ. ಹಾಗೂ 90 ಕೋಟಿ ರೂ. ಸಾಲ ಮಂಜೂರು ಮಾಡಿಸಿ ಕೊಡುವುದಾಗಿ ಯುವಕನಿಗೆ ಆಮಿಷವೊಡ್ಡಿ 14.25 ಲಕ್ಷ ರೂ. ಪಡೆದು ವಂಚಿಸಿದ್ದಾರೆ.

ಮುದ್ರಾ ಯೋಜನೆಯಡಿ ಸಾಲ ಪಡೆಯಲು ಯಲಹಂಕದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಜುಲೈ 28ರಂದು ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನವದೆಹಲಿಯಿಂದ ಮುದ್ರಾ ಲೋನ್ ಸರ್ವಿಸಸ್ ಪ್ರೈ.ಲಿ. ಕಚೇರಿಯಿಂದ ಕರೆ ಮಾಡುತ್ತಿದ್ದು, ನಿಮಗೆ 10 ಲಕ್ಷ ರೂ. ಸಾಲ ಮಂಜೂರು ಆಗಿದೆ ಎಂದು ಹೇಳಿ ನಂಬಿಸಿದ್ದಾನೆ. ಟಿಡಿಎಸ್, ಜಿಎಸ್‌ಟಿ ಮತ್ತು ವಿಮೆಗೆ ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ವಿವಿಧ ಬ್ಯಾಂಕ್ ಖಾತೆಗಳಿಗೆ 1.21 ಲಕ್ಷ ರೂ. ಜಮೆ ಮಾಡಿಕೊಂಡಿಸಿದ್ದಾನೆ. ಪದೇಪದೆ ಹಣ ಕೇಳಿದಾಗ ತನ್ನ ಹಣ ವಾಪಸ್ ಕೊಡುವಂತೆ ವ್ಯಕ್ತಿ ಕೇಳಿದ್ದಾರೆ. ಆಗ ಸೈಬರ್ ವಂಚಕರು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ನೊಂದ ವ್ಯಕ್ತಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾರಣ್ಯಪುರದ ಯುವಕನಿಗೆ ೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ, ಸ್ನೇಹ ಗಳಿಸಿ 90 ಕೋಟಿ ರೂ. ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ 14.25 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ.

ಏಪ್ರಿಲ್‌ನಲ್ಲಿ ೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಂದಿಗೆ ಯುವಕ ಸ್ನೇಹ ಬೆಳೆಸಿದ್ದಾನೆ. ಆತ ಎಮಿರೇಟ್ ಇಸ್ಲಾಮಿಕ್ ಬ್ಯಾಂಕ್‌ನಲ್ಲಿ 90 ಕೋಟಿ ರೂ. ಕೊಡಿಸುವುದಾಗಿ ಹೇಳಿ ಟಿಡಿಎಸ್, ಜಿಎಸ್‌ಟಿ ಮತ್ತು ವಿಮೆ ಹಣವೆಂದು ನೆಪ ಹೇಳಿ ಹಂತ ಹಂತವಾಗಿ ವಿವಿಧ ಬ್ಯಾಂಕ್‌ಗೆ 14.25 ಲಕ್ಷ ರೂ. ಜಮೆ ಮಾಡಿಕೊಂಡಿದ್ದಾನೆ. ಹಲವು ತಿಂಗಳು ಕಳೆದರೂ ಸಾಲ ಮಂಜೂರು ಆಗದ ಹಿನ್ನೆಲೆಯಲ್ಲಿ ಯುವಕ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ಯುವಕ ದೂರು ಕೊಟ್ಟಿದ್ದಾನೆ.

ಈ ಎರಡು ಪ್ರಕರಣಗಳಲ್ಲಿ ಒಂದೇ ಗ್ಯಾಂಗ್ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net