9 ಸಾವಿರ ಶುಶ್ರೂಷಕರ ಸೇವೆ ಕಾಯಂಗೆ ಒತ್ತಾಯ

04Jaggu11
Published on

ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ರಾಜ್ಯದ 9 ಸಾವಿರ ಶುಶ್ರೂಷಕ, ಶುಶ್ರೂಷಕಿಯರ ಸೇವೆ ಕಾಯಂಗೊಳಿಸುವಂತೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರ ಧ್ವನಿ ಎತ್ತಬೇಕು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅವರ ಕಚೇರಿಗೆ ರಾಜ್ಯ ಆರೋಗ್ಯ ಇಲಾಖೆ ಶುಶ್ರೂಷಕ, ಶುಶ್ರೂಷಕಿಯರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಭಾನುವಾರ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ಶುಶ್ರೂಷಕ, ಶುಶ್ರೂಷಕಿಯರ ಹಲವು ವರ್ಷಗಳಿಂದ 11 ಸಾವಿರ ರೂ. ಕಡಿಮೆ ವೇತನದಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ಸಂಕಷ್ಟದ ಕಾಲದಲ್ಲಿ ಜೀವ ಮುಡಿಪಾಗಿಟ್ಟು ಸರ್ಕಾರದ ಸಲಹೆ, ಮಾರ್ಗಸೂಚಿಗಳನ್ನು ಪಾಲಿಸುತ್ತ ಸೇವೆ ಸಲ್ಲಿಸಿದ್ದೇವೆ. ಆದರೆ, ನಮ್ಮ ಸೇವೆಯನ್ನು ಕಾಯಂ ಮಾಡುತ್ತಿಲ್ಲ. ಸಮಾನ ವೇತನವನ್ನೂ ನೀಡುತ್ತಿಲ್ಲ. ಅಲ್ಲದೇ ಗುತ್ತಿಗೆ ಸಿಬ್ಬಂದಿ ಎಂದು ನಮ್ಮನ್ನು ಕೀಳಾಗಿ ನೋಡಲಾಗುತ್ತಿದೆ. ಆದ್ದರಿಂದ ತಾವು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಆರೋಗ್ಯ ಸಚಿವರು, ಮುಖ್ಯಮಂತ್ರಿಗೆ ಒತ್ತಾಯಿಸಬೇಕು. ಪೌರಕಾರ್ಮಿಕರು ಮತ್ತು 108 ಸಿಬ್ಬಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿದಂತೆ ನಮಗೂ ವೇತನ ನೀಡಲು ಸರ್ಕಾರಕ್ಕೆ ಒತ್ತಾಯಿಸಬೇಕು. ನಮ್ಮ ಸೇವೆ ಕಾಯಂ ಮಾಡಿಕೊಳ್ಳುವರೆಗೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಿ ಆಗಲಿ ಅಥವಾ ನೇರ ನೇಮಕಾತಿ ಆಗಲಿ ಶುಶ್ರೂಷಕ, ಶುಶ್ರೂಷಕಿಯರನ್ನು ನೇಮಿಸಿಕೊಳ್ಳಬಾರದೆಂದು ಒತ್ತಾಯಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೂಪಾದೇವಿ ಬಾಳೇಕುಂದ್ರಿ, ಗೀತಾ ಹೆಗ್ಗನ್ನವರ, ನಾಗರತ್ನಾ ಮಾಟೋಳ್ಳಿ, ಶಾಂತವ್ವ ದೊಡ್ಡಮನಿ ಇದ್ದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ರಾಜ್ಯದ 9 ಸಾವಿರ ಶುಶ್ರೂಷಕ, ಶುಶ್ರೂಷಕಿಯರ ಸೇವೆ ಕಾಯಂಗೊಳಿಸುವಂತೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅವರ ಕಚೇರಿಗೆ ರಾಜ್ಯ ಆರೋಗ್ಯ ಇಲಾಖೆ ಶುಶ್ರೂಷಕ, ಶುಶ್ರೂಷಕಿಯರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಭಾನುವಾರ ಮನವಿ ಸಲ್ಲಿಸಲಾಯಿತು. ರೂಪಾದೇವಿ ಬಾಳೇಕುಂದ್ರಿ, ಗೀತಾ ಹೆಗ್ಗನ್ನವರ, ನಾಗರತ್ನಾ ಮಾಟೋಳ್ಳಿ, ಶಾಂತವ್ವ ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net