ಚಿತ್ರ ವಿ-ಚಿತ್ರ: ಬಾಲಕಿಯ ಜೀವರಕ್ಷಕ ಕಿಟ್ ತಯಾರಿ

sudina 1
Published on

ನವದೆಹಲಿ: ಜಗತ್ತಿನ ಬಹುತೇಕ ದೇಶಗಳು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನರಳುತ್ತಿವೆ. ಇದರ ವಿರುದ್ಧ ಸಾಕಷ್ಟು ಜನ ವೈದ್ಯರು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಅತ್ಯಗತ್ಯವಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಇವುಗಳ ಕೊರತೆ ಎದುರಾಗಿದೆ.

ಮಲೇಷ್ಯದ ಸೆಂಬಿಲಾನ್​ನ ಒಂಬತ್ತು ವರ್ಷದ ಬಾಲಕಿ ನೂರ್​ಅಫಿಯಾ ಈ ಸಮಸ್ಯೆಯ ತೀವ್ರತೆಯನ್ನು ಮನಗಂಡ ಬಳಿಕ, ಸ್ವತಃ ತಾನೇ ಪಿಪಿಇ ಕಿಟ್​ಗಳನ್ನು ತಯಾರಿಸುತ್ತಿದ್ದಾಳೆ. ಈವರೆಗೆ ಸುಮಾರು 250 ಪಿಪಿಇ ಗೌನ್ ಸಿದ್ಧಪಡಿಸಿದ ನೂರ್, ದಿನಕ್ಕೆ ನಾಲ್ಕು ಪಿಪಿಇ ಗೌನ್ ಹೊಲಿಯುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net