8ರಿಂದ ಕಕ್ಕುಂದ ಕಾಡಿನ ಲಕ್ಷ್ಮೀ ವೆಂಕಟೇಶ್ವರ ವಾರ್ಷಿಕ ಜಾತ್ರೆ

Published on

ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕುಂದ ಕಾಡಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏಪ್ರಿಲ್ 8ರಿಂದ 10ರವರೆಗೆ ನಡೆಯಲಿದೆ.

ಕಕ್ಕುಂದ ಕಾಡು ಲಕ್ಷ್ಮೀ ವೆಂಕಟೇಶ್ವರ ದೇವರ ಸನ್ನಿಧಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ 8ರಂದು ಮಂಗಳವಾರ ಬೆಳಗ್ಗೆ ಮಹಾಪೂಜೆ, ಬಳಿಕ ಧ್ವಜಾರೋಹಣ , ದೀಪಾರಾಧನೆ, ಮಹಾಪೂಜೆ, ದೇವರ ಬಲಿ ನಡೆಯಲಿದೆ.

ಏಪ್ರಿಲ್ 9ರಂದು ಬುಧವಾರ ದೇವರ ದರ್ಶನ ಬಲಿ, ಮಹಾಭಿಷೇಕ, ವಿಶೇಷ ಸೇವೆಗಳು ಮಧ್ಯಾಹ್ನ ಮಹಾಪೂಜೆ ಹಾಗೂ ದೇವರ ಬಲಿ ನಡೆಯಲಿದೆ. ಎರಡು ದಿನಗಳು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಏಪ್ರಿಲ್ 9 ರಂದು ದೇವರ ಮೆರವಣಿಗೆಯಲ್ಲಿ ಸಾಗಿ ಪವಿತ್ರ ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ ದೇವಾಲಯಕ್ಕೆ ಹಿಂತಿರುಗಲಿದೆ. ಬಳಿಕ ದೇವರ ದರ್ಶನ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ. ಏಪ್ರಿಲ್ 10ರಂದು ಗುರುವಾರ ಶುದ್ಧ ನವಕ ಕಲಶ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net