

ಹುಣಸೂರು: ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಮಂಡಳಿ(ಎನ್‌ಸಿಡಿಸಿ) ವತಿಯಿಂದ ತಾಲೂಕಿನಲ್ಲಿ 8ಕ್ಕೂ ಹೆಚ್ಚು ಬಿಎಂಸಿ ಕೇಂದ್ರಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿ ಕಿರಂಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬಿಎಂಸಿ ಕೇಂದ್ರದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮತ್ತು ಹಾಲು ಉತ್ಪಾದಕರಿಗೆ ಹೆಚ್ಚಿನ ರೀತಿ ಯಲ್ಲಿ ಪ್ರೋತ್ಸಾಹಿಸಲು ಬಿಎಂಸಿ ಕೇಂದ್ರಗಳ ಸ್ಥಾಪನೆ ಅಗತ್ಯವಾಗಿದೆ. ತಾಲೂಕಿನಲ್ಲಿ ಹಲವಾರು ಕಡೆಗಳಲ್ಲಿ ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ವತಿಯಿಂದ ಬಿಎಂಸಿ ಕೇಂದ್ರಗಳ ನಿರ್ಮಾಣ ಕಾಮ ಗಾರಿ ನಡೆದಿದೆ. ಇದೀಗ 8 ಕಡೆಗಳಲ್ಲಿ ಎನ್‌ಸಿಡಿಸಿ ಸಹಯೋಗದಲ್ಲಿ ಬಿಎಂಸಿ ಕೇಂದ್ರಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಕಿರಂಗೂರು ಡೈರಿ ಸ್ಥಾಪನೆಗೊಂಡ ಕೆಲವೇ ವರ್ಷಗಳಲ್ಲಿ 8 ಲಕ್ಷ ರೂ.ಗಳ ಲಾಭದೊಂದಿಗೆ ಬಿಎಂಸಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ನಿರ್ದೇಶಕಿ ಶಿವಗಾಮಿ ಮಾತನಾಡಿದರು. ಉಪವ್ಯವ ಸ್ಥಾಪಕ ಸಣ್ಣತಮ್ಮೇ ಗೌಡ, ಕರಿಬಸವಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್, ಗ್ರಾಮದ ಡೈರಿ ಅಧ್ಯಕ್ಷ ಮಾದೇಗೌಡ, ಕಾರ್ಯದರ್ಶಿ ಶಿವು, ವಿಸ್ತರಣಾಧಿಕಾರಿ ಗೌತಮ್, ಡೇರಿ ನಿರ್ದೇಶಕರು ಮತ್ತು ಗ್ರಾಮಸ್ಥರು ಹಾಜರಿದ್ದರು.