ಬ್ಯಾಕ್‌ ಫ್ಲಿಪ್ ಮಾಡಿ ಸ್ವಿಮ್ಮಿಂಗ್ ಪೂಲ್​ಗೆ ಹಾರಿದ 84 ವರ್ಷದ 'ಅಜ್ಜಿ'! Swimming Pool ವಿಡಿಯೋ ನೋಡಿ

old woman jump
Published on

ಅಮೆರಿಕಾ: ( Swimming Pool ) ವಯಸ್ಸು ಕೇವಲ ಸಂಖ್ಯೆ.. ಜೀವನೋತ್ಸಾಹ ಮನುಷ್ಯನೊಳಗಿರಬೇಕು. ಇತ್ತೀಚೆಗಷ್ಟೇ 84 ವರ್ಷದ ಅಜ್ಜಿಯೊಬ್ಬರು ಈಜುಕೊಳಕ್ಕೆ ಜಿಗಿದು , ನೋಡುಗರೂ  ಆಶ್ಚರ್ಯ ಪಡುವಂತೆ ಮಾಡಿರುವ ವಿಡಿಯೋ  ವೈರಲ್ ಆಗಿದೆ. ವಯಸ್ಸಾದ ಈ ಹಂತದಲ್ಲೂ ವೃದ್ಧ ಮಹಿಳೆಯ ಉತ್ಸಾಹವನ್ನು ಕಂಡು, ಇಂಟರ್ನೆಟ್ ಸಾರ್ವಜನಿಕರು ಅವರ ಅಪಾರ ಅಭಿಮಾನಿಯಾಗಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ?: ಆರಂಭದಲ್ಲಿ, ವಯಸ್ಸಾದ ಮಹಿಳೆಯೊಬ್ಬರು ಈಜುಕೊಳದ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ಕಾಣಬಹುದು. ಇದರ ನಂತರ, ಮಹಿಳೆ ಸಂಪೂರ್ಣ ಆತ್ಮವಿಶ್ವಾಸದಿಂದ ಕೊಳದ ತುದಿಯಲ್ಲಿ ನಿಂತಿದ್ದಾಳೆ. ನಂತರ ವೃದ್ಧೆ ಬ್ಯಾಕ್‌ಫ್ಲಿಪ್ ಮಾಡುತ್ತಾಳೆ. ಸರಳವಾಗಿ ಈಜುಕೋಳಕ್ಕೆ ಜಿಗಿಸ ಈ ವಯಸ್ಸಾದ ಮಹಿಳೆಯ  ಸಾಹಸ ನೋಡಿ ನೆಟಿಜನ್‌ಗಳು ಬೆಚ್ಚಿಬಿದ್ದು ಆಕೆಯ ಧೈರ್ಯಕ್ಕೆ ನಮನ ಸಲ್ಲಿಸುತ್ತಿದ್ದಾರೆ.

ಇನ್​ಸ್ಟಾಗ್ರಾನ್​​ ಹ್ಯಾಂಡಲ್ @lucineiabridge ನಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ, ಬಳಕೆದಾರರು ಬರೆದಿದ್ದಾರೆ, ನಾನು ಅಸೂಯೆ ಅನುಭವಿಸುತ್ತಿದ್ದೇನೆ. ಆಕೆಗೆ 84 ವರ್ಷ, ಆದರೆ ಮೋಜಿನ ಜೀವನವನ್ನು ನಡೆಸುತ್ತಿದ್ದಾರೆ. ಈ ಪೋಸ್ಟ್ ಅನ್ನು ಇದುವರೆಗೆ 80 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ, ಆದರೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, ಈ ಮಹಿಳೆ ನನಗಿಂತ ಬಲಶಾಲಿ ಮತ್ತು ಧೈರ್ಯಶಾಲಿ.  ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ಅಜ್ಜಿ ಅದನ್ನು ಸಾಬೀತುಪಡಿಸಿದರು. ನನಗೆ 46 ವರ್ಷ, ಇನ್ನೂ ನನಗೆ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಾಮೆಂಟ್ ಮಾಡುವ ಮೂಲಕವಾಗಿ ವೃದ್ಧೆಯನ್ನು ಹಾಡಿ ಹೋಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net