ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು...!

nurses-ians
Published on

ನವದೆಹಲಿ: ವೈದ್ಯರು, ನರ್ಸ್​ಗಳಿಗೆ ಕೋವಿಡ್​ ವಾರಿಯರ್​ ಎಂದು ಗೌರವಿಸಲಾಗುತ್ತೆ. ಆದರೆ, ರೋಗಿಗಳಿಗೆ ಚಿಕಿತ್ಸೆ ನೀಡುವ ಇವರಿಗೂ ಕರೊನಾದಿಂದ ರಕ್ಷಣೆ ಬೇಕಲ್ಲವೇ..?

ಹೀಗಾಗಿಯೇ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ಗಳು ತಮಗೂ ಕುಡಿಯುವ ನೀರು, ಪಿಪಿಇ ಕಿಟ್​ಗಳನ್ನು ನೀಡಿ ಎಂದು ಆಡಳಿತ ಮಂಡಳಿಗೆ ಕೋರಿದ್ದಾರೆ. ಬದಲಿಗೆ ಅವರಿಗೆ ಸಿಕ್ಕಿದ್ದು, ಟರ್ಮಿನೇಷನ್​ ಆರ್ಡರ್​. ಅದೂ ಕೂಡ ವಾಟ್ಸ್ಯಾಪ್​ ಮೂಲಕ.

ದೆಹಲಿಯ ಹಮ್​ದರ್ದ್​ ಆಸ್ಪತ್ರೆ ಎಂದೇ ಕರೆಯಲಾಗುವ ಹಕೀಮ್​ ಅಬ್ದುಲ್​ ಹಮೀದ್​ ಶತಮಾನೋತ್ಸವ ಆಸ್ಪತ್ರೆಯ 84 ನರ್ಸ್​ಗಳನ್ನು ಕೆಲಸದಿಂದ ತೆಗೆಯಲಾಗಿದೆ. ಈ ವಿಚಾರವನ್ನು ನರ್ಸ್​ಗಳ ಒಕ್ಕೂಟ ದೆಹಲಿ ಸಿಎಂ ಗಮನಕ್ಕೂ ತಂದಿದೆ.

ವಜಾ ಮಾಡಲಾದ ಕೆಲವು ನರ್ಸ್​​ಗಳು ಕರೊನಾ ಸೋಂಕಿಗೆ ಒಳಗಾಗಿ ಹೋಮ್​ ಕ್ವಾರಂಟೈನ್​ನಲ್ಲಿ ಇದ್ದಾರೆ. ಇವರ ಕೋವಿಡ್​ ಪರೀಕ್ಷೆಗೂ ಆಸ್ಪತ್ರೆ ಹಣ ಪಡೆದಿದೆ. ಗುತ್ತಿಗೆ ಒಪ್ಪಂದ ಮುಗಿದಿದ್ದರೆ ಆಗಲೇ ತಿಳಿಸಬೇಕಿತ್ತು. ಮೂಲಸೌಕರ್ಯ ಕೇಳಿದ್ದಕ್ಕೆ ಕೆಲಸದಿಂದ ತೆಗೆದಿರುವುದು ಎಷ್ಟು ಸರಿ ಎಂದು ನರ್ಸ್​ಗಳು ಪ್ರಶ್ನಿಸಿದ್ದಾರೆ.

ಗುತ್ತಿಗೆ ಒಪ್ಪಂದ ಮುಗಿದಿದ್ದರಿಂದ ಕೆಲಸದಿಂದ ತೆಗೆಯಲಾಗಿದೆ. ಮತ್ತೆ ಸಂದರ್ಶನಕ್ಕೆ ಹಾಜರಾಗಲು ಎಲ್ಲರಿಗೂ ಅವಕಾಶವಿದೆ ಎಂಬುದು ಆಸ್ಪತ್ರೆ ಆಡಳಿತ ಮಂಡಳಿ ವಾದ. ಆದರೆ, ಸಂಕಷ್ಟದ ಸಮಯದಲ್ಲಿ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net