80ರ ವಯಸ್ಸಿನಲ್ಲೂ ಕುಂದದ ಉತ್ಸಾಹ

25ldh3 ganapa
ಗಣೇಶ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಎಲ್.ಬಿ. ಶಾಮಚಾರ್.
Published on

ಲಿಂಗದಹಳ್ಳಿ: ಗ್ರಾಮದ ನಿವಾಸಿ 80 ವರ್ಷದ ಎಲ್.ಬಿ. ಶಾಮಚಾರ್ ಕಳೆದ 50 ವರ್ಷಗಳಿಂದ ಗೌರಿ, ಗಣೇಶನ ವಿಗ್ರಹಗಳನ್ನು ತಯಾರಿಸುವ ಕಾಯಕದ ಮೂಲಕ ಇಳಿ ವಯಸ್ಸಿನಲ್ಲಿಯೂ ಯುವಕರಿಗೆ ಮಾದರಿಯಾಗಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ದುರ್ಗಾಮಾತೆ ಸೇರಿದಂತೆ ವಿವಿಧ ವಿಗ್ರಹಗಳು, ಲಿಂಗದಹಳ್ಳಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ದಕ್ಷಬ್ರಹ್ಮ್ಮನ ವಿಗ್ರಹ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಕೃತಕ ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿ ಮಣ್ಣಿನ ವಿಗ್ರಹಗಳನ್ನು ನಿರ್ಮಿಸುತ್ತಿರುವುದು ಇವರ ಹೆಗ್ಗಳಿಕೆ.

ಲಿಂಗದಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಆಚಾರಿ ವಂಶಸ್ಥರು ತಮ್ಮ ಕುಲಕಸುಬು ಮಾಡಲು ಹಿಂಜರಿದು ವಿಗ್ರಹ ತಯಾರಿಸಿಕೊಡುವಂತೆ ದುಂಬಾಲು ಬಿದ್ದರೂ ಅವರೇ ವಿಗ್ರಹಗಳನ್ನು ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ನಾನು ವಿಗ್ರಹ ಮಾಡಿಕೊಡುವುದಿಲ್ಲ. ಯಾವುದೇ ವ್ಯಕ್ತಿ ಪರಂಪರಾಗತವಾಗಿ ಬಂದ ಕುಲಕಸುಬನ್ನು ಮುಂದುವರಿಸಿಕೊಂಡು ಹೋದಲ್ಲಿ ಅದುವೇ ತಮ್ಮ ವಂಶದ ಹಿರಿಯರಿಗೆ ನೀಡುವ ಗೌರವ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net