8,071 ಕೋಟಿ ನೆರೆ ನಷ್ಟ; ಅಧ್ಯಯನ ತಂಡಕ್ಕೆ ಸಿಎಂ ಮಾಹಿತಿ

Yediyurappa
Published on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟಾರೆ 8,071 ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಹಾನಿ ಸಮೀಕ್ಷೆಗೆಂದು ಆಗಮಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ತಂಡ, ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಯಾಗಿ ಪ್ರವಾಹದಿಂದಾದ ನಷ್ಟದ ಮಾಹಿತಿ ಪಡೆಯಿತು. ರಾಜ್ಯದಲ್ಲಿ ಹಿಂದಿನ 2 ವರ್ಷವೂ ಭಾರಿ ಮಳೆ, ಪ್ರವಾಹ, ಭೂಕುಸಿತ ಉಂಟಾಗಿ 22 ಜಿಲ್ಲೆಗಳು ತತ್ತರಿಸಿದ್ದವು. ಈ ಬಾರಿ ಕರೊನಾ ಸಂಕಷ್ಟದ ನಡುವೆ ಪ್ರವಾಹ ಅಪ್ಪಳಿಸಿ 4.03 ಲಕ್ಷ ಹೆಕ್ಟೇರ್ ಬೆಳೆ, ರಸ್ತೆ, ಸೇತುವೆ, ವಿದ್ಯುತ್ ಕಂಬ, ಮನೆಗಳು, ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಬಿಎಸ್​ವೈ ವಿವರಿಸಿದರು.

ವಿಕೋಪವನ್ನು ತಡೆಯಬಲ್ಲ ಬಹುದೊಡ್ಡ ಮರು ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಿ, ಕಳೆದ ವರ್ಷ 1,500 ಕೋಟಿ ರೂ. ವೆಚ್ಚ ಮಾಡಿದ್ದು, ಈ ಬಾರಿ 200 ಕೋಟಿ ರೂ. ಭರಿಸಲಿದೆ. ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ 4 ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು ಕೇಂದ್ರ ಸೃಜಿಸಿದ್ದು, ಕರೊನಾದಿಂದಾಗಿ ತಡೆಯುಂಟಾಗಿದೆ ಎಂದರು.

ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಕರೊನಾ ಹಾಗೂ ಪ್ರವಾಹಕ್ಕಾಗಿ 460 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆ 8,071 ಕೋಟಿ ರೂ. ನಷ್ಟವಾಗಿದ್ದರೂ ರಾಜ್ಯ ವಿಕೋಪ ಪರಿಹಾರ ನಿಧಿಯ ನಿಯಮಾವಳಿ ಪ್ರಕಾರ 628.70 ಕೋಟಿ ರೂ. ಆಗುತ್ತದೆ. ಕರೊನಾ ಪ್ರಕರಣಗಳ ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಕೋರಿದ ಬಿಎಸ್​ವೈ, ರಾಜ್ಯ ವಿಕೋಪ ಪರಿಹಾರ ನಿರ್ವಹಣಾ ಯೋಜನೆ 2020 ಅನ್ನು ಪ್ರಾಧಿಕಾರ ಅನುಮೋದಿಸಿದೆ. ಯೋಜನೆಯು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಮರು ನಿರ್ಮಾಣ ಚಟುವಟಿಕೆಗಳನ್ನು ಹೊಂದಿದೆ ಎಂದು ತಿಳಿಸಿದರು.

ಕೈಗೊಂಡ ಪರಿಹಾರ ಕ್ರಮ
  • ಮೃತರು- 42; ವಿತರಿಸಿದ ಪರಿಹಾರ ತಲಾ ಕುಟುಂಬಕ್ಕೆ 5 ಲಕ್ಷ ರೂ. ಇದರಲ್ಲಿ ಎಸ್​ಡಿಆರ್​ಎಫ್ ತಲಾ ಪಾಲು- 4 ಲಕ್ಷ ರೂ., ರಾಜ್ಯ ಸರ್ಕಾರ- 1 ಲಕ್ಷ ರೂ.
  • ಸಂತ್ರಸ್ತ ಕುಟುಂಬಗಳು- 7636; ತಾತ್ಪೂರ್ತಿಕ ತುರ್ತು ಪರಿಹಾರ - 10,000 ರೂ. ಇದರಲ್ಲಿ ಎಸ್​ಡಿಆರ್​ಎಫ್ ತಲಾ ಪಾಲು- 3,200 ರೂ. ರಾಜ್ಯ ಸರ್ಕಾರ- 6,800 ರೂ.
  • ಬಹುತೇಕ ಹಾನಿಯಾದ ಮನೆಗಳಿಗೆ 3 ಲಕ್ಷ ರೂ. ಎಸ್​ಡಿಆರ್​ಎಫ್- 95,100 ರೂ., ರಾಜ್ಯ ಸರ್ಕಾರ- 2,04,000 ರೂ.
ಕೃಷಿ ವಲಯದ ನಷ್ಟ
  • ಕೃಷಿ ಬೆಳೆಗಳು- 3,31,170 ಹೆಕ್ಟೇರ್ ಹಾನಿಯ ಮೊತ್ತ 4731.70 ಕೋಟಿ ರೂ.
  • ತೋಟಗಾರಿಕೆ ಬೆಳೆಗಳು- 32,976 ಹೆ., ಹಾನಿಯ ಮೊತ್ತ 251.75 ಕೋ. ರೂ.
  • ಪ್ಲಾಂಟೇಷನ್ ಬೆಳೆಗಳು- 1,261 ಹೆ., 11.36 ಕೋ. ರೂ.
  • ಒಟ್ಟು 4,04,028 ಹೆಕ್ಟೇರ್, ಒಟ್ಟು ಮೊತ್ತ 5521.80 ಕೋಟಿ ರೂ.
ಮೂಲಸೌಕರ್ಯ ನಷ್ಟದ ಅಂದಾಜು
  1. ಪ್ರಮುಖ ರಸ್ತೆಗಳು- 2,509 ಕಿ.ಮೀ., -ಠಿ;1798.14 ಕೋ.
  2. ಗ್ರಾಮೀಣ ರಸ್ತೆಗಳು- 10,775 ಕಿ.ಮೀ., 552.33 ಕೋ.ರೂ.
  3. ನಗರ ರಸ್ತೆಗಳು- 898 ಕಿ.ಮೀ., 76.87 ಕೋ. ರೂ.
  4. ಸೇತುವೆಗಳು- 1268, 319.25 ಕೋ.ರೂ.
  5. ಸಣ್ಣ ನೀರಾವರಿ- 491 ಸ್ಕೀಮ್್ಸ, 141.73 ಕೋ.ರೂ.
  6. ವಿದ್ಯುತ್ ಉಪಕರಣಗಳ ಮರುಸ್ಥಾಪನೆ- 33.12 ಕೋ. ರೂ.
  7. ಕೆರೆಗಳು (ಸ.ನೀ, ಜಿ.ಪಂ.)- 360, 23.37 ಕೋ. ರೂ.
  8. ಸರ್ಕಾರಿ ಕಟ್ಟಡಗಳು- 3168, 83.18 ಕೋ.ರೂ.
  9. ಕುಡಿಯುವ ನೀರು ಮತ್ತು ನೈರ್ಮಲ್ಯ- 97, 2.21 ಕೋ. ರೂ.
  10. ಕುಡಿಯುವ ನೀರಿನ ಯೋಜನೆಗಳು- -ಠಿ;178, 7.69 ಕೋ.
  11. ಒಟ್ಟು ಮೂಲಸೌಕರ್ಯ ಹಾನಿ- 2408.67 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net