ನಾಳೆ ಅಲ್ಲಿ 8 ಕೋಟಿ ಮಂದಿಯ ಇನ್​ಸ್ಟಾಗ್ರಾಂ ಖಾತೆಯೇ ಬ್ಯಾನ್!

instafargar pic
Published on

ನವದೆಹಲಿ: ಸೋಷಿಯಲ್ ಮೀಡಿಯಾ ಆ್ಯಪ್​ಗಳಾದ ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ ಮುಂತಾದವುಗಳನ್ನು ಬಹಳಷ್ಟು ಮಂದಿ ಬಿಟ್ಟಿರಲಾರದಷ್ಟೂ ಹಚ್ಚಿಕೊಂಡಿರುತ್ತಾರೆ. ಅಂಥದ್ದರಲ್ಲಿ ಅಲ್ಲೊಂದು ಕಡೆ ಕೋಟ್ಯಂತರ ಜನರ ಇನ್​ಸ್ಟಾಗ್ರಾಂ ಖಾತೆಗಳೇ ಬ್ಯಾನ್​ ಆಗಲಿವೆ.

ಹೌದು.. ನಾಳೆ ಅಂದಾಜು 8 ಕೋಟಿ ಜನರ ಇನ್​ಸ್ಟಾಗ್ರಾಂ ಖಾತೆಗಳು ಬ್ಯಾನ್​ ಆಗಲಿವೆ. ಈಗಾಗಲೇ ಅಲ್ಲಿ ಫೇಸ್​ಬುಕ್​ ನಿಷೇಧಗೊಂಡಿದ್ದು, ನಾಳೆ ಇನ್​ಸ್ಟಾಗ್ರಾಂ ಕೂಡ ಬ್ಯಾನ್ ಆಗಲಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮರ್ ಪುಟಿನ್ ಅವರ ಸಾವಿಗೆ ಸಂಬಂಧಿತ ಫೇಸ್​ಬುಕ್​ ಪೋಸ್ಟ್​ಗೆ ರಷ್ಯಾ, ಯೂಕ್ರೇನ್​ ಮತ್ತು ಪೋಲಂಡ್​ನಲ್ಲಿ ಅವಕಾಶ ನೀಡಿದ್ದೇ ಇಂಥದ್ದೊಂದು ನಿಷೇಧಕ್ಕೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ರಷ್ಯಾದಲ್ಲಿ ಮಾ. 14ರಿಂದ ಇನ್​ಸ್ಟಾಗ್ರಾಂ ನಿಷೇಧಗೊಳ್ಳಲಿದ್ದು, ಸುಮಾರು 8 ಕೋಟಿ ಬಳಕೆದಾರರು ಅದರ ಸಂಪರ್ಕ ವಂಚಿತರಾಗಲಿದ್ದಾರೆ.

ರಷ್ಯಾದಲ್ಲಿ ಈಗಾಗಲೇ ಫೇಸ್​ಬುಕ್​ ನಿಷೇಧಿಸಲಾಗಿದ್ದು, ಮಾ. 14ರಿಂದ ಇನ್​ಸ್ಟಾಗ್ರಾಂ ಕೂಡ ಬ್ಯಾನ್ ಆಗಲಿದೆ. ಆದರೆ ವಾಟ್ಸ್​ಆ್ಯಪ್​ ಅಬಾಧಿತವಾಗಿ ಇರಲಿದೆ ಎಂದು ರಷ್ಯನ್ ಏಜೆನ್ಸಿಯೊಂದು ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net