

ಮೈಸೂರು: ನಗರದ ಕುಂಬಾರಕೊಪ್ಪಲು ನ ತಾಜ್ಯ ಟಕದ ಆವರಣದಲ್ಲಿ ನಗರ ಪಾಲಿಕೆಗೆ ಸೇರಿದ್ದ 8 ಸ್ವಚ್ಛತಾ ವಾಹನಗಳ ಸುವಾರು 32,500 ರೂ. ಮೌಲ್ಯದ ಬ್ಯಾಟರಿಗಳು ಕಳವಾಗಿದೆ.
ನಗರದ ವಿವಿಧ ಬಡಾವಣೆಗಳಲ್ಲಿನ ಕಸ ಸಾಗಿಸಲು ಗೂಡ್ಸ್ ವಾಹನಗಳನ್ನು ಬಳಸಲಾಗುತ್ತಿತ್ತು. ಆ.9 ರಂದು ಕೆಲಸ ಮುಗಿಸಿ ವಾಹನಗಳನ್ನು ಅಲ್ಲಿ ನಿಲ್ಲಿಸಿ ಚಾಲಕರು ತೆರಳಿದ್ದರು.
ವಾರನೆಯ ದಿನ ಚಾಲಕ ವಾಹನಗಳನ್ನು ತೆಗೆಯಲು ಯತ್ನಿಸಿದ ವೇಳೆ ಬ್ಯಾಟರಿಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಪರಿಸರ ಇಂಜಿನಿಯರ್ ಮೈತ್ರಿ ದೂರು ನೀಡಿದ್ದು, ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.