8 ರಿಂದ ಡಾ.ಸುಜಾತಾ ಅಕ್ಕಿ ನಾಟಕೋತ್ಸವ

YLP DRAMA
Published on

ರಂಗಯಾನ ಟ್ರಸ್ಟ್ ವತಿಯಿಂದ ಫೆ.8ರಿಂದ 10ರವರೆಗೆ ಕಲಾ ಮಂದಿರದ ಆವರಣದಲ್ಲಿನ ಕಿರು ರಂಗಮಂದಿರದಲ್ಲಿ ಡಾ.ಸುಜಾತಾ ಅಕ್ಕಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ವಿಕಾಸ್ ಚಂದ್ರ ತಿಳಿಸಿದರು.

ಫೆ.8ರಂದು ಸಂಜೆ 6 ಗಂಟೆಗೆ ಜಾನಪದ ಸಂಜೆ ನಡೆಯಲಿದೆ. ಬಳಿಕ 6.30ಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನಾಟಕೋತ್ಸವ ಉದ್ಘಾಟಿಸುವರು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು. ಡಾ.ಸುಜಾತಾ ಅಕ್ಕಿ, ಅರವಿಂದ ಮಾಲಗತ್ತಿ ಇನ್ನಿತರರು ಹಾಜರಿರುವರು. ಬಳಿಕ 7.15ಕ್ಕೆ ಚಾಮಚಲುವೆ ನಾಟಕ ಪ್ರದರ್ಶನ ಇರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೆ. 9ರಂದು ಸಂಜೆ 6 ಗಂಟೆಗೆ ಮಂಡ್ಯದ ಅರುಣೋದಯ ಕಲಾ ತಂಡದಿಂದ ಸುಗಮ ಸಂಗೀತ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ, ನಂತರ 7.15ಕ್ಕೆ ಸೋಲಿಗರ ಬಾಲೆ ನಾಟಕ ಪ್ರದರ್ಶನ ಇರಲಿದೆ. ಫೆ.10ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ರಂಗಕರ್ಮಿ ಡಾ.ಸಿ.ಬಸವಲಿಂಗಯ್ಯ, ಡಾ.ಸುಜಾತ ಅಕ್ಕಿ, ಬಿ.ಎಂ.ರಾಮಚಂದ್ರ, ಬಿ. ಪ್ರಶಾಂತ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದ ನಂತರ ಸಂಜೆ 7 ಗಂಟೆಗೆ ಇಕ್ಕದ ಮಾರಯ್ಯ-ಕೊಡದ ಮಾರಿ ಮತ್ತು ಇತರ ನಾಟಕದ ಒಳಹೊಕ್ಕು ಎಂಬ ವಿಶೇಷ ಕಾರ್ಯಕ್ರಮ ಇದೆ ಎಂದರು.

ಹಿರಿಯ ರಂಗಕರ್ಮಿ ಬಿ.ಎಂ.ರಾಮಚಂದ್ರ, ಎಂ.ಎಸ್.ಗೋಪಿನಾಥ್, ದರ್ಶನ್, ವೇಣುಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net