

ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ 8 ಯೂಟ್ಯೂಬ್ ಚಾನಲ್ಗಳನ್ನ ನಿಷೇಧಿಸಿದೆ
ನಿಷೇಧಕ್ಕೊಳಗಾದ ಚಾನಲ್ಗಳು
ನಿಷೇಧಕ್ಕೊಳಗಾದ ಚಾನಲ್ಗಳು
ವರ್ಲ್ಡ್ ಬೆಸ್ಟ್ ನ್ಯೂಸ್, 1.7 ಮಿಲಿಯನ್ ಚಂದಾದಾರರು ಮತ್ತು 18 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಯುಟ್ಯೂಬ್ ಚಾನೆಲ್ ಆಗಿದ್ದು, ಭಾರತೀಯ ಸೇನೆಯನ್ನು ವಿಚಾರಗಳನ್ನ ತಪ್ಪಾಗಿ ಪ್ರಸರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ಈ ಚಾಬಲ್ಗಳು ಇತ್ತೀಚೆಗೆ ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್ಗಳ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದವು ಎಂದು ಪ್ರೆಸ್ ಇನ್ಫರ್ಮೆಶನ್ ಬ್ಯುರೊ (PCB) ಸರ್ಕಾರದ ಗಮನಕ್ಕೆ ತಂದಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಇದರಲ್ಲಿ SPN9 News 4.8 ಮಿಲಿಯನ್ ಫಾಲೊವರ್ಗಳನ್ನ ಹೊಂದಿತ್ತು ಹಾಗೂ 148 ಕೋಟಿ ವೀಕ್ಷಣೆ ಕಂಡಿತ್ತು.
ಈ ಎಂಟೂ ಚಾನಲ್ಗಳು ಲೋಕಸಭೆ ಚುನಾವಣೆ, ಇವಿಎಂ ಮಷಿನ್ ಸೇರಿದಂತೆ ರಾಷ್ಟ್ರಪತಿ, ಪ್ರಧಾನಿ, ಸಚಿವರು, ಹಾಗೂ ಕೇಂದ್ರದ ಯೋಜನೆಗಳು, ಆಧಾರ್, ಪ್ಯಾನ್ ಕಾರ್ಡ್ ಬಗ್ಗೆ ಜನರಿಗೆ ತಪ್ಪು ಸಂದೇಶ ಹಾಗೂ ಸುಳ್ಳು ಮಾಹಿತಿಯನ್ನ ಪ್ರಸರಿಸುತ್ತಿದ್ದವು ಎಂದು ಆರೋಪಿಸಲಾಗಿದೆ. ಇನ್ನು ನಿಷೇಧಿಸಿದ 8 ಚಾನಲ್ಗಳೆಲ್ಲವೂ ಬಹುತೇಕ ಒಂದು ಮಿಲಿಯನ್ಗೂ ಅಧಿಕ ಫಾಲೋವರ್ಸ್ಗಳನ್ನ ಹೊಂದಿದೆ.