ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ Anurag Kashyap: AVR ಮಾಲೀಕ ಅರವಿಂದ್​​ ರೆಡ್ಡಿ ನಿರ್ಮಾಣದ ‘8’ ಚಿತ್ರದಲ್ಲಿ ನಟನೆ..!

8 cinema
8 cinema
Published on
ಸುಜಯ್ ಶಾಸ್ತ್ರಿ ನಿರ್ದೇಶನದ '8' ಚಿತ್ರದ ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಕಾಣಿಸಿಕೊಳ್ಳುತ್ತಿದ್ದಾರೆ. AVR ಮಾಲೀಕ ಅರವಿಂದ್​​ ರೆಡ್ಡಿ ನಿರ್ಮಾಣದ ‘8’ ಚಿತ್ರದಲ್ಲಿ ನಟ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ರಿಲೀಸ್​​ ಡೇಟ್​​ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ.
ಕನ್ನಡ ಕಲಾವಿದರು, ಫಿಲ್ಮ್ ಮೇಕರ್ಸ್ ಬೇರೆ ಬೇರೆ ಭಾಷೆಗಳಲ್ಲಿ ನಟಿಸೋದು ಹೆಚ್ಚಾಗಿದೆ. ಅದೇ ರೀತಿ ಬಾಲಿವುಡ್ ಸ್ಟಾರ್ ನಟ, ನಟಿಯರು ಕನ್ನಡಕ್ಕೆ ಬರ್ತಿದ್ದಾರೆ. ಇದೀಗ ಮೊದಲ ಬಾರಿ ಅನುರಾಗ್ ಕಶ್ಯಪ್ ಕನ್ನಡ ಡೆಬ್ಯೂವನ್ನು ನನ್ನ ಸಿನಿಮಾ ಮೂಲಕ ಮಾಡುತ್ತಿರುವುದು ಖುಷಿಯ ವಿಷಯ ಎಂದಿದ್ದಾರೆ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ.
ನಿರ್ಮಾಪಕ ಅರವಿಂದ್​​ ರೆಡ್ಡಿಗೆ ಕಥೆ ಇಷ್ಟವಾಯ್ತು...!
ಅರವಿಂದ್​​ ರೆಡ್ಡಿಯವರದ್ದು ಅದ್ಭುತ ವ್ಯಕ್ತಿತ್ವ ಎಂದ ಸುಜಯ್​ ಶಾಸ್ತ್ರಿ...!
ಈ ಬಗ್ಗೆ ನಿರ್ದೇಶಕ ಸುಜಯ್‌ ಶಾಸ್ತ್ರಿ ವಿಜಯವಾಣಿ ಜತೆಗೆ ಮಾತನಾಡಿದ್ದು, ವಿಶೇಷ ಎನ್ನುವುದಕ್ಕಿಂತಲೂ ಇದೊಂದು ವಿರಳ ಕಥೆ. ಮೊದಲ ಬಾರಿಗೆ ಈ ಕಥೆಯನ್ನು ನಿರ್ಮಾಪಕ ಅರವಿಂದ್‌ ವೆಂಕಟೇಶ್‌ ರೆಡ್ಡಿಗೆ ಹೇಳಿದಾಗ ಕೂಡಲೇ ಒಪ್ಪಿಕೊಂಡರು. ಅಲ್ಲ ನನ್ನ ಅವರ ಬಾಂಧವ್ಯ ಮಾತಿನಲ್ಲಿ ಹೇಳಲಾಗದು. ಅವರ ವ್ಯಕ್ತಿತ್ವದ ಬಗ್ಗೆ ಅವರ ಜತೆಗೆ ಒಡನಾಟ ಇಟ್ಟುಕೊಂಡವರಿಗೆ ಮಾತ್ರ ಗೊತ್ತಿರುತ್ತೆ. ಅವರದ್ದು ಅದ್ಭುತ ವ್ಯಕ್ತಿತ್ವ. ತುಂಬಾ ಸಿಂಪಲ್​ ಮತ್ತು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿತ್ವ ಅರವಿಂದ್​​ ರೆಡ್ಡಿಯವರದ್ದು. ಅವರೂ ಸ್ಪೋರ್ಟ್ಸ್​​ ಪರ್ಸನ್​ ಆಗಿರೋದ್ರಿಂದ ಅವರನ್ನ ಒಪ್ಪಿಸೋದು ನನಗೆ ಸುಲಭವಾಯ್ತು. ಇದರ ಜತೆಗೆ ಒಂದು ವಾರದೊಳಗೆ ಅನುರಾಗ್‌ ಕಶ್ಯಪ್‌ರನ್ನು ಕನೆಕ್ಟ್ ಮಾಡಿಸಿ ಮಾತುಕತೆಗೆ ಕೂಡ ಏರ್ಪಾಡು ಮಾಡಿಸಿದರು' ಎಂದಿದ್ದಾರೆ.
ಅನುರಾಗ್‌ ಮೆಚ್ಚಿದ ಸುಜಯ್‌
'ನಿರ್ದೇಶಕ ಅನುರಾಗ್‌ ಕಶ್ಯಪ್‌ ಆಗ ಬಹಳ ಬಿಝಿ ಇದ್ದರು. ಒಂದು ಬಾರಿ ಕಥೆ ಹೇಳುತ್ತೇನೆ ಎಂದು ಅವರನ್ನು ಒಪ್ಪಿಸಿ ಕಥೆ ಹೇಳಿದೆ. ಅದನ್ನು ಕೇಳಿದ ಬಳಿಕ ಅವರು ನನ್ನ ಕಡೆ ನೋಡಿ ಭಾವುಕರಾಗಿದ್ದರು. ಕೂಡಲೇ ಒಪ್ಪಿ ಅವರ ಉಳಿದ ಚಿತ್ರಗಳ ಡೇಟ್ಸ್‌ ನೋಡಿ ನಮಗೂ ಡೇಟ್ಸ್‌ ನೀಡಿದರು. ವಿಶೇಷ ಎಂದರೆ ತಕ್ಷಣ ಅವರು ಫುಟ್ಬಾಲ್‌ ತರಿಸಿ ಅಭ್ಯಾಸ ಮಾಡಲು ಶುರು ಮಾಡಿದರು' ಎಂದು ಸುಜಯ್‌ ಶಾಸ್ತ್ರಿ ಹೇಳಿದ್ದಾರೆ. ಅಲ್ಲದೇ ಮೊದಲು ಕಥೆ ಕೇಳಿ ನೀನೇ ಈ ಕಥೆಯ ಮುಖ್ಯ ಪಾತ್ರವನ್ನ ಮಾಡು ನಾನು ಪ್ರೊಡ್ಯೂಸ್​​ ಮಅಡುತ್ತೇನೆಂದು ಅನುರಾಗ್​​ ಹೇಳಿದ್ದರು.
ಅವರ ಪಾತ್ರದ ಲುಕ್‌ ಟೆಸ್ಟ್‌ ಹಾಗೂ ಪೋಸ್ಟರ್‌ ಫೋಟೊಶೂಟ್‌ಗಾಗಿ ಒಂದೂವರೆ ಗಂಟೆ ನೀಡಲಾಗಿತ್ತಂತೆ. ಆದರೆ ಕೇವಲ 22 ನಿಮಿಷಗಳಲ್ಲಿ ನಮಗೆ ಬೇಕಾದ ಲುಕ್‌ ಸಿಕ್ಕಿತ್ತು ಎಂದಿದ್ದಾರೆ ಸುಜಯ್ ಶಾಸ್ತ್ರಿ. ಪುಟ್ಬಾಲ್​​​​ ಸಿನಿಮಾ ಆಗಿರೋದ್ರಿಂದ ಸಿಕ್ಕಾಪಟ್ಟೆ ಶಾಟ್ಸ್​​ ಬೇಕಾಗುತ್ತೆ. ಸುಜಯ್​ ಜೇಮ್ಸ್​​ ಬಾಲು ಅವರಿಂದ ನನಗೆ ಈ ಕಥೆಯ ಐಡಿಯಾ ಸಿಕ್ಕಿತು. ಮೊದಲಿಗೆ ಅನುರಾಗ್​​ ಕಶ್ಯಪ್​​​ ಕಥೆ ಕೇಳಿ ಒಪ್ಪಿಕೊಂಡಿರಲಿಲ್ಲ. ಆದರೆ ನಾನು ಅವರಿಗೆ ಕಥೆಯ ವಿವರಣೆ ಮಾಡಿದಾಗ ಈ ಸಿನಿಮಾ ಅವರೇ ಮಾಡಬೇಕು ಎಂದು ಡಿಸೈಡ್​​ ಮಾಡಿದ್ರು ಅನುರಾಗ್​​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net