ಕೂಡಗಿ ಗ್ರಾಮದಲ್ಲಿ ಗಣರಾಜ್ಯೋತ್ಸವ ಆಚರಣೆ

27 SARAG 2
Published on

ಸರಗೂರು: ತಾಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಗಿ ಗ್ರಾಮದಲ್ಲಿ ಮಹನಾಯಕ ಗೆಳೆಯರ ಬಳಗದಿಂದ 75ನೇ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.

ಮೊಳೆಯೂರು ವಲಯ ಅರಣ್ಯಾಧಿಕಾರಿ ಅಮೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಸಂವಿಧಾನ ಹಾಗೂ ಸ್ವಾತಂತ್ರೃ ಹೋರಾಟಗಾರರ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ಸದೃಢ ದೇಶ ನಿರ್ಮಿಸಲು ಸಾಧ್ಯ ಎಂದರು.

ಕರ್ನಾಟಕ ಪಬ್ಲಿಕ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಾಂತಕುಮಾರ್ ಮುಖ್ಯಭಾಷಣ ಮಾಡಿದರು. ದಸಂಸ ಸಂಚಾಲಕ ಕೂಡಗಿ ಗೋವಿಂದರಾಜು, ಯಜಮಾನರಾದ ನಾಗರಾಜು, ಶಿವಣ್ಣ, ಮಹಾದೇವಯ್ಯ, ಶಿವಯ್ಯ, ದೊಡ್ಡಲಿಂಗಯ್ಯ , ಚಿಕ್ಕಲಿಂಗಯ್ಯ, ನಾಗೇಶ, ಭೀಮಣ್ಣ, ಮಹನಾಯಕ ಗೆಳೆಯರ ಬಳಗದ ಅಧ್ಯಕ್ಷ ಶಿವು, ಉಪಾಧ್ಯಕ್ಷ ಶಶಾಂಕ್, ಕಾರ್ಯದರ್ಶಿ ಧರ್ಮ, ಶಿವರಾಜು, ದೇವರಾಜು, ವಿನೋದ್, ವಿಠಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net