74 ನಾಮಪತ್ರಗಳು ತಿರಸ್ಕೃತ, 300 ಅಭ್ಯರ್ಥಿಗಳ ನಾಮಪತ್ರ ಸಿಂಧು

eci voting
Published on

ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಪರಿಶೀಲನೆ ಬಳಿಕ 300 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಒಟ್ಟು 333 ಪುರುಷ, 25 ಮಹಿಳೆಯರು ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದರು. 419 ನಾಮಪತ್ರ ಪುರಸ್ಕೃತಗೊಂಡಿದ್ದು, ನಾಮಪತ್ರ ಪರಿಶೀಲನೆ ಬಳಿಕ 74 ನಾಮಪತ್ರಗಳು ತಿರಸ್ಕೃತಗೊಂಡಿವೆ. ಅಂತಿಮವಾಗಿ 300 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಯಾವ ಕ್ಷೇತ್ರ? ಎಷ್ಟು ಅಭ್ಯರ್ಥಿಗಳು

ಉಡುಪಿ-ಚಿಕ್ಕಮಗಳೂರು 10, ಹಾಸನ 18, ದಕ್ಷಿಣ ಕನ್ನಡ 10, ಚಿತ್ರದುರ್ಗ 24, ತುಮಕೂರು 22, ಮಂಡ್ಯ 19, ಮೈಸೂರು 24, ಚಾಮರಾಜನಗರ 22, ಬೆಂಗಳೂರು ಗ್ರಾಮಾಂತರ 27, ಬೆಂಗಳೂರು ಉತ್ತರ 21, ಬೆಂಗಳೂರು ಕೇಂದ್ರ 28, ಬೆಂಗಳೂರು ದಕ್ಷಿಣ 24,ಚಿಕ್ಕಬಳ್ಳಾಪುರ

32, ಕೋಲಾರ 19 ಸೇರಿದಂತೆ 300 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಸಿಂಧುಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಏ.8 ಕೊನೆಯ ದಿನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net