ದೇಹದ ಈ ಭಾಗದಲ್ಲಿತ್ತು 72 ಲಕ್ಷ ರೂ. ಮೌಲ್ಯದ ಚಿನ್ನ! ಕಳ್ಳನ ಸಂಚು ಕಂಡು ಕಸ್ಟಮ್ಸ್​ ಅಧಿಕಾರಿಗಳೇ ದಂಗು | Worth Gold

Worth Gold
Published on

ದೆಹಲಿ: ಗುದನಾಳದ ಕುಳಿ (Rectum Cavity)ಯಲ್ಲಿ 72 ಲಕ್ಷ ರೂ. ಮೌಲ್ಯದ ಚಿನ್ನವನ್ನು(Worth Gold) ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಇಐ) ದುಬೈ ನಗರದಿಂದ ಬರುತ್ತಿದ್ದ ಭಾರತೀಯ ಪ್ರಯಾಣಿಕನನ್ನು ದೆಹಲಿಯ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ತಡರಾತ್ರಿ (ನ.07) ಬಂಧಿಸಿದ್ದಾರೆ.

ದುಬೈದಿಂದ ದೆಹಲಿಗೆ ಬರುತ್ತಿದ್ದ ಪ್ರಯಾಣಿಕರಲ್ಲಿ ಕೆಲವರು ಕೆಲ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧಾರಿಸಿ, ಕಸ್ಟಮ್ಸ್​ ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದಿದ್ದಾರೆ. 1,124 ಗ್ರಾಂ ತೂಕದ ರಾಸಾಯನಿಕ ಪೇಸ್ಟ್​ ರೂಪದಲ್ಲಿ ಹೊಂದಿರುವ ಚಿನ್ನವನ್ನು, ಅಂಡಕಾರದ ಆಕಾರದ ಮೂರು ಕ್ಯಾಪ್ಸೂಲ್ಸ್​ಗಳನ್ನು ಕಳ್ಳಸಾಗಣಿಕೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಸ್ಟಮ್ಸ್​ ಆಕ್ಟ್​, 1962ರ ಸೆಕ್ಷನ್​ 104ರ ಪ್ರಕಾರ ಪ್ರಯಾಣಿಕರು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net