71 ಗಂಟೆ ಕಲಾಪ, 37 ವಿಧೇಯಕ ಅಂಗೀಕಾರ

UT Khadar
Published on

ಬೆಂಗಳೂರು: ವಿಧಾನಮಂಡಲ ಅಧಿವೇಶನ 9 ದಿನಗಳಲ್ಲಿ 71 ಗಂಟೆ 2 ನಿಮಿಷ ಕಾಲ ಕಾರ್ಯಕಲಾಪ ನಡೆದಿದ್ದು, 39 ವಿಧೇಯಕ ಮಂಡಿಸಲಾಗಿದೆ. ಈ ಪೈಕಿ 37 ವಿಧೇಯಕಗಳು ಅಂಗೀಕರಿಸಲಾಗಿದೆ.

ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿರುವ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಧನವಿನಿಯೋಗ ಸೇರಿದಂತೆ ಒಟ್ಟು 39 ವಿಧೇಯಕ ಮಂಡಿಸಲಾಗಿದ್ದು, 37 ಅಂಗೀಕರಿಸಲಾಗಿದೆ ಸ್ಪೀಕರ್ ಮಾಹಿತಿ ನೀಡಿದ್ದಾರೆ.

ನಿಯಮ 60ರಡಿಯಲ್ಲಿ ನೀಡಿದ್ದ 3 ನಿಲುವಳಿ ಸೂಚನೆಗಳನ್ನು 69ಕ್ಕೆ ಪರಿವರ್ತಿಸಿರುವುದನ್ನು ಸೇರಿದಂತೆ 7 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ಸರ್ಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ಪ್ರಾರಂಭಿಸಲಾಗಿದೆ. 21 ಅಧಿಸೂಚನೆಗಳು, 4 ಆಧ್ಯಾದೇಶಗಳು ಮತ್ತು 142 ವಾರ್ಷಿಕ ವರದಿಗಳು, 169 ಲೆಕ್ಕ ಪರಿಶೋಧನಾ ವರದಿಗಳು, 1 ಲೆಕ್ಕ ತಪಾಸಣಾ ವರದಿ, 5 ಅನುಪಾಲನಾ ವರದಿಗಳು, 6 ಅನುಸರಣಾ ವರದಿ, 1 ವಿಶೇಷ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.

2306 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 2199 ಪ್ರಶ್ನೆಗಳು ಅಂಗೀಕೃತಗೊಂಡಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 128ಕ್ಕೆ ಮತ್ತು ಲಿಖಿತ ಮೂಲಕ ಉತ್ತರಿಸುವ 2064 ಪ್ರಶ್ನೆಗಳ ಪೈಕಿ 1662 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 383 ಸೂಚನೆಗಳ ಪೈಕಿ 178 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದ್ದು, ಈ ಪೈಕಿ 166 ಸೂಚನೆಗಳನ್ನು ಮತ್ತು ಶೂನ್ಯ ವೇಳೆ 13 ಸೂಚನೆಗಳನ್ನು ಚರ್ಚಿಸಲಾಗಿದೆ. ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಲಾಗಿದ್ದು, ತನಿಖೆ ಮತ್ತು ಪರಿಶೀಲನೆ, ವರದಿಗಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ವಹಿಸಲಾಗಿದೆ ಎಂದು ಖಾದರ್ ಹೇಳಿದ್ದಾರೆ.

ಅಧಿವೇಶನದ ಮುಖ್ಯಾಂಶಗಳು

- ಕಾಲ್ತುಳಿತ, ಪಹಲ್ಗಾಂ, ಏರ್ ಇಂಡಿಯಾ ದುರಂತದಲ್ಲಿ ನಿಧನ ಹೊಂದಿದವರಿಗೆ ಸಂತಾಪ

- 18 ಬಿಜೆಪಿ ಸದಸ್ಯರ ಅಮಾನತ್ತು ಹಿಂಪಡೆದ ಸ್ಥಿರೀಕರಣ ಪ್ರಸ್ತಾವನೆ ಅನುಮೋದನೆ

- 2025-26ನೇ ಸಾಲಿನ ಪೂರಕ ಅಂದಾಜು ಕಂತನ್ನು ಮತಕ್ಕೆ ಹಾಕಿ ಅಂಗೀಕಾರ

- ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರು, ನಾಮನಿರ್ದೇಶನ ಸಭಾಧ್ಯಕ್ಷರಿಗೆ ಅಧಿಕಾರ

- ಸಿಎಜಿಯ 6 ವರದಿಗಳು ಮಂಡನೆ

- ಮಾನವ ಅಂಗಾಂಗ ಕಸಿ ಕೇಂದ್ರ ಸರ್ಕಾರದ ಅಧಿನಿಯಮ ಅಳವಡಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net