

ಕಿಯೆವ್/ಮಾಸ್ಕೋ: ಭಾರತಕ್ಕೆ ಕಚ್ಚಾತೈಲವನ್ನು ಪ್ರತಿ ಬ್ಯಾರೆಲ್ಗೆ 70 ಡಾಲರ್ಗೂ ಕಡಿಮೆ ಬೆಲೆಯಲ್ಲಿ ಪೂರೈಸಲು ರಷ್ಯಾ ಮುಂದಾಗಿದೆ. ಇನ್ನೊಂದೆಡೆ ರಷ್ಯಾದ ಕಚ್ಚಾತೈಲ ಆಮದನ್ನು ಹಂತ ಹಂತವಾಗಿ ನಿಷೇಧಿಸುವುದಕ್ಕೆ ಯುರೋಪ್ ರಾಷ್ಟ್ರಗಳು ಯೋಜನೆ ರೂಪಿಸಿವೆ.
ರಷ್ಯಾ ಮತ್ತು ಭಾರತದ ತೈಲ ಕಂಪನಿಗಳು ಈ ಸಂಬಂಧ ೆಬ್ರವರಿಯ ಕೊನೆಯ ಭಾಗದಲ್ಲಿ ಮಾತುಕತೆ ನಡೆಸಿದ್ದು, 40 ದಶಲಕ್ಷ ಬ್ಯಾರೆಲ್ಗಿಂತ ಹೆಚ್ಚು ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ. ರಷ್ಯಾದಿಂದ ಅತಿ ಹೆಚ್ಚು ವಿನಾಯಿತಿ ದರದಲ್ಲಿ ತೈಲ ಖರೀದಿಸಲು ಭಾರತ ಪ್ರಯತ್ನಿಸುತ್ತಿದೆ. ಒಪೆಕ್ ಹಾಗೂ ತೈಲ ಉತ್ಪಾದಕ ರಾಷ್ಟ್ರಗಳ ಜತೆಗಿನ ವಹಿವಾಟಿನ ಅಪಾಯವನ್ನು ಮನಗಂಡು ಭಾರತದ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ. ಜಾಗತಿಕವಾಗಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 105 ಡಾಲರ್ ಆಸುಪಾಸಿನಲ್ಲಿದೆ. ಭಾರತವು ತನ್ನ ತೈಲ ಬೇಡಿಕೆ ಪೂರೈಸಿಕೊಳ್ಳಲು ಶೇಕಡ 85ರಷ್ಟು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸಣ್ಣ ಪಾಲನ್ನು ರಷ್ಯಾದಿಂದ ಖರೀದಿಸಲಾಗುತ್ತಿದೆ. ರಷ್ಯಾಕ್ಕೆ ಆದಾಯ ತಂದುಕೊಡುವ ಪ್ರಮುಖ ಮೂಲವಾಗಿ ಕಚ್ಚಾ ತೈಲ ರೂಪುಗೊಂಡಿದೆ. ಯುರೋಪ್ ರಾಷ್ಟ್ರಗಳ ರ್ನಿಬಂಧ ಕಾರಣ ತೈಲ ರ್ತು ಪ್ರಮಾಣ ರಷ್ಯಾದಲ್ಲಿ ಶೇಕಡ 17 ಕುಸಿತ ಕಂಡಿದೆ. ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಂಗಳಿಗೆ 15 ದಶಲಕ್ಷ ಬ್ಯಾರೆಲ್ ಖರೀದಿಸುತ್ತಿವೆ. ಭಾರತದ ಕಂಪನಿಗಳು ಕೇಳುತ್ತಿರುವ ಬೆಲೆಗೆ ಕಚ್ಚಾ ತೈಲ ಒದಗಿಸಲು ರಷ್ಯಾ ಕಂಪನಿ ಒಪ್ಪಿದರೆ ಶ್ರೀಘ್ರವೇ ಇದು ಭಾರತಕ್ಕೆ ತಲುಪಲಿದೆ.
ಯುರೋಪ್ ರ್ನಿಬಂಧ ಕ್ರಮ: ರಷ್ಯಾದಿಂದ ಕಚ್ಚಾತೈಲ ಆಮದನ್ನು ಹಂತ ಹಂತವಾಗಿ ನಿಷೇಧಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಯುರೋಪ್ನ 27 ರಾಷ್ಟ್ರಗಳು ಅದಕ್ಕೆ ಒಪ್ಪಿಗೆ ಸೂಚಿಸಿವೆ. ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದನ್ನು ತಡೆಯಲು ಈ ಉಪಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಯುರೋಪ್ ಹೇಳಿದೆ. ಈ ಯೋಜನೆಯನ್ನು ಎಲ್ಲ ಸರ್ಕಾರಗಳು ಒಪ್ಪಿಕೊಂಡರೆ ಜಗತ್ತಿನ ಅತಿದೊಡ್ಡ ಗಾತ್ರದ ರ್ನಿಬಂಧ ರಷ್ಯಾ ಮೇಲೆ ಜಾರಿ ಆಗಲಿದೆ. ಇಂಧನ ಕ್ಷೇತ್ರದ ಮಟ್ಟಿಗೆ ಇದು ದೊಡ್ಡದಾಗಿದ್ದು, ದಾಖಲೆ ಬರೆಯಲಿದೆ. ಬುಧವಾರ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ ಶೇಕಡ 2 ಏರಿಕೆ ಆಗಿದ್ದು 107.11 ಡಾಲರ್ ಆಗಿದೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ 37.5 ಬೆಲೆ ಏರಿದಂತಾಗಿದೆ.
1 ಲಕ್ಷ ಟನ್ ಆಹಾರ ಲೂಟಿ
ಯೂಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾ, ಕಳೆದ ಎರಡು ವರ್ಷದ ಅವಧಿಯಲ್ಲಿ ಲುಹಾನ್ಸ್ಕ್ ಪ್ರಾಂತ್ಯದಿಂದ 1 ಲಕ್ಷ ಟನ್ ಆಹಾರ ಧಾನ್ಯವನ್ನು ಕೊಳ್ಳೆ ಹೊಡೆದಿದೆ. ಲುಹಾನ್ಸ್ಕ್ ಪ್ರಾಂತ್ಯದಲ್ಲಿ ರಷ್ಯನ್ನರು ಅತಿಕ್ರಮಣ ಮಾಡಿದ್ದು, ಕೃಷಿ ಭೂಮಿಯಲ್ಲಿ ಹೊಸ ಬಿತ್ತನೆ ಮಾಡಿಲ್ಲ ಎಂದು ಸೆಂಟರ್ ಾರ್ ಸಿವಿಲ್ ಲಿರ್ಬಟೀಸ್ನ ಮುಖ್ಯಸ್ಥರಾದ ಒಲೆಕ್ಸಾಂಡ್ರಾ ಮಾಟ್ವಿಚುಕ್ ಆರೋಪಿಸಿದ್ದಾರೆ.