

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ಮುಂಜಾನೆ ಜೈತ್‌ಪುರದ ಹರಿ ನಗರದಲ್ಲಿ ಗೋಡೆ ಕುಸಿದು ಇಬ್ಬರು ಯುವತಿಯರು ಸೇರಿದಂತೆ 7 ಏಳು ಜನರು ಮೃತಪಟ್ಟಿದ್ದಾರೆ.
ಜೈತ್‌ಪುರದ ಹರಿನಗರದಲ್ಲಿ ಗೋಡೆ ಕುಸಿದ ಘಟನೆಯಲ್ಲಿ 3 ಪುರುಷರು, 2 ಮಹಿಳೆಯರು ಮತ್ತು 2 ಹುಡುಗಿಯರು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಹಳೆ ದೇವಾಲಯದ ಬಳಿ ಘಟನೆ ಸಂಭವಿಸಿದೆ. ಅಲ್ಲಿ ಹಲವಾರು ಗುಜರಿ ವ್ಯಾಪಾರಿಗಳು ವಾಸ ಮಾಡುತ್ತಿದ್ದರು.ಭಾರೀ ಮಳೆ ಹಿನ್ನೆಲೆ ಹಳೆ ಮನೆಯ ಗೋಡೆ ಕುಸಿದು 8 ಜನ ಸಿಲುಕಿಕೊಂಡಿದ್ದರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಹಲವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರತ ಹವಾಮಾನ ಇಲಾಖೆ (ಐಎಂಡಿ) ರಾಜಧಾನಿಯ ಹೆಚ್ಚಿನ ಭಾಗಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಿದ್ದು, ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.(ಏಜೆನ್ಸೀಸ್)