

ರೋಟರಿ ಮಿಡ್‌ಟೌನ್ ವತಿಯಿಂದ ಡಿ.7 ಮತ್ತು 8ರಂದು ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಚಾಲಕ ಅಯ್ಯಣ್ಣ ತಿಳಿಸಿದರು.
ನಗರದ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು ಐದು ನೂರು ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಡಿ.7ರಂದು ಬೆಳಗ್ಗೆ 9 ಮೈಸೂರು ವಿವಿ ಓವಲ್ ಮೈದಾನದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಚಾಲನೆ ನೀಡಲಾಗುತ್ತದೆ. ರಂಗರಾವ್ ಸಂಸ್ಥೆಯ ಮುಖ್ಯಸ್ಥ ಅರ್ಜುನ್ ರಂಗ, ರೊಟೇರಿಯನ್ ಡಾ.ಕೆ.ಎ.ಪ್ರಹ್ಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.8ರಂದು ಸಂಜೆ 4.30ಕ್ಕೆ ದ್ವಾರಕಾ ನಗರದಲ್ಲಿನ ಮಾನಸ ಕುಟೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ನಟ ಧರ್ಮ ಕೀರ್ತಿರಾಜ್, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ರಜತ್ ಶರ್ಮ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಪದಾಧಿಕಾರಿಗಳಾದ ಮಿಲ್ಟನ್, ನಾಗರಾಜ್, ವೆಂಕಟೇಶ್, ರವೀಂದ್ರ ಬಾಬು ಇದ್ದರು.