ರಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ! | Earthquake

Untitled design - 2025-09-13T094143.211
Published on

Earthquake: ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಶನಿವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಯುಎಸ್‌ಜಿಎಸ್ ಪ್ರಕಾರ, ಕಮ್ಚಟ್ಕಾ ಪ್ರದೇಶದ ಆಡಳಿತ ಕೇಂದ್ರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ ಪೂರ್ವಕ್ಕೆ 111 ಕಿಲೋಮೀಟರ್ (69 ಮೈಲು) ದೂರದಲ್ಲಿ 39.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು "ಅಪಾಯಕಾರಿ"(ಸುನಾಮಿ) ಅಲೆಗಳು ಭೂಕಂಪದ ಕೇಂದ್ರಬಿಂದುದಿಂದ 300 ಕಿಲೋಮೀಟರ್ ಒಳಗೆ ರಷ್ಯಾದ ಕರಾವಳಿಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಯುಎಸ್‌ಜಿಎಸ್ ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 7.5 ಎಂದು ವರದಿ ಮಾಡಿತು, ಆದರೆ ನಂತರ ಅದನ್ನು ಕಡಿಮೆ ಮಾಡಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net