ಚಾಮರಾಜನಗರ: ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಮಕ್ಕಳಿಗೆ ಅಭಿನಯ, ಸಂಗೀತ ಹಾಗೂ ನಾಟಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಡಿಷನ್ ಮೂಲಕ ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದ್ದು, ನ.6ರಂದು ನಗರದ ಮಹೇಶ್ ಗ್ಯಾಸ್ ಆಫೀಸ್ ಎದುರಿನ ಸಿ.ಆರ್.ಕೆ. ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಆಡಿಷನ್ ಶುರುವಾಗಲಿದೆ.
7 ರಿಂದ 14ವರ್ಷದೊಳಗಿನ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ಇದಾಗಿದೆ. ಆಯ್ಕೆಗೊಂಡ ಮಕ್ಕಳಿಗೆ ರಂಗಾಯಣ ಮತ್ತು ರಂಗಶಂಕರದಲ್ಲಿ ತರಬೇತಿ ಪಡೆದ, ಮಕ್ಕಳ ರಂಗಭೂಮಿಯಲ್ಲಿ ಪರಿಣಿತಿ ಹೊಂದಿರುವ ರಂಗ ನಿರ್ದೇಶಕರಿಂದ ಅಭಿನಯದ ಮೂಲ ಪಾಠಗಳು, ಸಂಗೀತದ ಪರಿಚಯದೊಂದಿಗೆ ಹಾಡುಗಾರಿಕೆ ಹಾಗೂ ನಾಟಕ ತರಬೇತಿ ನೀಡಲಾಗುತ್ತದೆ. ಚಾಮರಾಜನಗರ ಮತ್ತು ಮೈಸೂರಿನ ರಂಗಮಂದಿರಗಳಲ್ಲಿ ನಾಟಕ ಪ್ರದರ್ಶನ ನೀಡಲಾಗುತ್ತದೆ ಹಾಗೂ ಪ್ರಮಾಣ ಪತ್ರ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 7411491077(ಕಿರಣ್‌ಗಿರ್ಗಿ), 9740689176 (ಶಿವಶಂಕರ್ ಚಟ್ಟು) ಅವರನ್ನು ಸಂಪರ್ಕಿಸಬಹುದು.