ಮಗಳ ಗೆಳತಿಯನ್ನೇ ಮದುವೆಯಾದ 66 ವರ್ಷದ ವ್ಯಕ್ತಿ; 30ರ ಮಗಳು ಮಾಡಿದ್ದೇನು..?

66 man marries his daughters 35 year old friend
Published on

ಅಮೆರಿಕಾ: ದಾಂಪತ್ಯ ಎನ್ನುವುದು ಸಂದರವಾದ ಬಂಧವಾಗಿದೆ. ಈ ಬಾಂಧವ್ಯಕ್ಕೆ ತನ್ನದೇ ಆಗಿರುವ ಕೆಲವು ಕಟ್ಟುಪಾಡುಗಳಿದ್ದವು. ಆದರೆ ಇಂದು ವಯಸ್ಸು, ಜಾತಿ, ಪ್ರದೇಶವನ್ನೂ ಮೀರಿ ಪ್ರೀತಿ ಸಂಪಾದಿಸಿದ ಎಷ್ಟೋ ಸ್ಟೋರಿಗಳನ್ನು ನಾವು ಕೇಳಿದ್ದೇವೆ. ಹೀಗೆ ಆದರೆ 66 ವರ್ಷದ ವ್ಯಕ್ತಿಯೊಬ್ಬ ತನ್ನ ಮಗಳ ಸ್ನೇಹಿತೆಯನ್ನು ಮದುವೆಯಾಗುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

66 ವರ್ಷದ ಪಂಡಿತ್ ರಿಚರ್ಡ್ ಕೀ 30 ವರ್ಷದ ಹುಡುಗಿಯಾದ ಮಗಳ ಗೆಳತಿಯ ಜತೆ ಸಂಬಂಧದಲ್ಲಿದ್ದರು. ರಿಚರ್ಡ್ ಮೊದಲ ಪತ್ನಿ ಜೂಲಿಯಾ ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದೇ ವೇಳೆ ಪತಿ ರಿಚರ್ಡ್‌ ಮಗಳ ಗೆಳತಿಯ ಜತೆ ಆಫೇರ್ ಶುರು ಮಾಡಿಕೊಂಡಿದ್ದರು. ಪತ್ನಿ ಜತೆಗಿನ 34 ವರ್ಷದ ಸಂಬಂಧವನ್ನು ಮುರಿದು ಕೊಂಡರು. ಪತ್ನಿ ಜೂಲಿಯಾಳಿಂದ 2016ರಲ್ಲಿಯೇ ದೂರವಾಗಿದ್ದಾರೆ. ಈಗ ಮಗಳ ಗೆಳತಿಯ ಜತೆ ರಿಚರ್ಡ್ ಹಸೆಮಣೆ ಏರಿದ್ದಾರೆ.

ಜೂನ್ 24 ರಂದು ಮಗಳ ಪ್ರಾಯದ ಯುವತಿ ಲೂಸಿ ರೋಸ್ ಜತೆ ರಿಚರ್ಡ್ ಹಸೆಮಣೆ ಏರಿದ್ದಾರೆ. ಇವರ ಮದ್ವೆಯಲ್ಲಿ ಭಾಗವಹಿಸಿದ ಅತಿಥಿಗಳು ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಮದುವೆಯಲ್ಲಿ ಪುತ್ರಿ ಜೆಮ್ಮಾ ಭಾಗವಹಿಸಿರಲಿಲ್ಲ. ಫೋಟೋದಲ್ಲಿ ಪ್ರಸ್ತುತ ಬಿ ಇನ್ ಫುಟ್‌ಬಾಲ್ ಸ್ಪೋಟ್ಸ್‌ನ ನಿರೂಪಕನಾಗಿರುವ ಪಂಡಿತ್ ರಿಚರ್ಡ್ ಹಾಗೂ ವೃತ್ತಿಯಲ್ಲಿ ವಕೀಲೆಯಾಗಿರುವ ಲೂಸಿ ರೋಸ್‌ ಮದುವೆ ಧಿರಿಸಿನಲ್ಲಿದ್ದಾರೆ.

ಮೊದಲೇ ಮದ್ಯಕ್ಕೆ ದಾಸಿಯಾಗಿದ್ದ ಜೆಮ್ಮಾಗೆ ಅಪ್ಪನ ಈ ಸಂಬಂಧ ಮದ್ಯಕ್ಕೆ ಮತ್ತಷ್ಟು ದಾಸಿಯಾಗುವಂತೆ ಮಾಡಿದೆ. ಮಗಳ ಪ್ರಾಯದ ಹುಡುಗಿಯ ಜತೆ ಸಂಬಂಧ ಇರುವುದು ಕಂಡು ಬಂದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಯ ಮದುವೆಯ ಕುರಿತಾಗಿ ಮಾತನಾಡಿದ ಮಹಿಳೆ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net