ಸಮೀಕ್ಷೆಗೆ ಲಾಗಿನ್​ ಆಗದ 645 ಶಿಕ್ಷಕರು!

Veerabhadreshwara Jatra festival begins today
Published on

ಕೋಲಾರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಶುಕ್ರವಾರ ನೋಟಿಸ್​ ಜಾರಿಗೊಳಿಸಿದ್ದಾರೆ.

ಸೆ.22ರಿಂದ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ನೇಮಕಗೊಂಡ ಗಣತಿದಾರರಿಗೆ ತರಬೇತಿ ನೀಡಲಾಗಿದೆ. ಗಣತಿದಾರರಿಗೆ ಆ್ಯಪ್​ ಜತೆಗೆ ಕೈಪಿಡಿ ಸಹ ನೀಡಲಾಗಿದೆ. ಒಬ್ಬ ಗಣಿತಿದಾರ 150 ಮನೆಗಳಿಗೆ ಹೋಗಿ ಸಮೀೆ ನಡೆಸುವ ಮಾಹಿತಿ ಒದಗಿಸಿದ್ದು, ಗುರುವಾರ ಬೆಳಗ್ಗೆಯಿಂದಲೇ ಸಮೀೆಗೆ ತೆರಳಿ ಲಾಗಿನ್​ ಆಗಲು ನಿರ್ದೇಶನ ನೀಡಲಾಗಿತ್ತು. ಈ ಬಗ್ಗೆ ಮೇಲ್ವಿಚಾರಣೆ ನಡೆಸಲೂ ಸೂಚಿಸಲಾಗಿತ್ತು. ಆದರೆ, ಸುಮಾರು ಗಣತಿದಾರರು ಆ್ಯಪ್​ ತೆರೆದುಕೊಳ್ಳುತ್ತಿಲ್ಲ, ಸರ್ವರ್​ ಸಮಸ್ಯೆ ನೆಪವೊಡ್ಡಿ ಲಾಗಿನ್​ ಆಗಿರಲಿಲ್ಲ. ಈ ಬಗ್ಗೆ ಗುರುವಾರ ಸಂಜೆ 4.30ರಲ್ಲಿ ಪರಿಶೀಲಿಸಲಾಗಿದ್ದು, ಒಟ್ಟು 645 ಗಣತಿದಾರರು ಲಾಗಿನ್​ ಆಗದೆ ರ್ನಿಲಕ್ಷ$್ಯ ತೋರಿರುವುದು ಕಂಡು ಬಂದಿದೆ. ಈ ಸಂಬಂಧ ಜಿಲ್ಲೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ನೊಟೀಸ್​ ನೀಡಲಾಗಿದೆ.

ಕರ್ತವ್ಯ ನಿರ್ವಹಿಸದೆ ಇರುವುದರಿಂದ ಸಮೀೆ ಕಾರ್ಯದ ಪ್ರಗತಿಯು ಕುಂಠಿತವಾಗಿದೆ. ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸದೆ ನಿರ್ಲಕ್ಸ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಕಾರಿ ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ಕರ್ತವ್ಯ ನಿರ್ವಹಿಸುವಲ್ಲಿ ಅಸಡ್ಡೆಯಿಂದ ವರ್ತಿಸಿರುವುದಕ್ಕೆ, ಕರ್ನಾಟಕ ನಾಗರಿಕ ಸೇವಾ ನಿಯಮ 1966 ಕಲಂ 3ರನ್ವಯ ಏಕೆ ಶಿಸ್ತು ಕ್ರಮಕೈಗೊಳ್ಳಬಾರದು ಎಂದು ನೋಟಿಸ್​ ನೀಡಿದ್ದು, ಇದು ತಲುಪಿದ 24 ತಾಸಿನಲ್ಲಿ ಖುದ್ದು ಹಾಜರಾಗಿ ಸಮಜಾಯಿಷಿ ನೀಡಬೇಕು, ತಪ್ಪಿದಲ್ಲಿ ಶಿಸ್ತು ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಶಿಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯಾರ್ಯಾರಿಗೆ ನೋಟಿಸ್​ ಜಾರಿ?

ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಂಗಾರಪೇಟೆ ಎಂ.ಕೆ.ಶಶಿಕಲಾ, ಕೋಲಾರ ಪಿ.ಮಧುಮಾಲತಿ ಪಡುವಣೆ, ಕೆಜಿಎಫ್ ​ ಅನಿತಾ, ಮಾಲೂರು ಕೆಂಪಯ್ಯ, ಮುಳಬಾಗಿಲು ರಾಮಚಂದ್ರಪ್ಪ, ಶ್ರೀನಿವಾಸಪುರ ಮುನಿವೆಂಕಟಪ್ಪಗೆ ನೋಟಿಸ್​ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳಾದ ಕೋಲಾರ ಕೆ.ಮಂಜುಳಾ, ಮಾಲೂರು ಎಚ್​.ಇ.ಅಂಬಿಕಾ, ಮುಳಬಾಗಿಲು ನರಸಿಂಹಮೂರ್ತಿ, ಆರ್​.ಎ.ರಾಜಣ್ಣ, ಶ್ರೀನಿವಾಸಪುರ ಎಚ್​.ಎಂ.ಪ್ರಸನ್ನ, ಬಂಗಾರಪೇಟೆ ವಿ.ಅನಿತಾ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ಎಲ್ಲೆಲ್ಲಿ ಆ್ಯಪ್​ ಬಳಕೆ ಮಾಡಿಲ್ಲ?

ತಾಲೂಕು ಲಾಗಿನ್​ ಆಗದವರ ಸಂಖ್ಯೆ

ಕೋಲಾರ 179

ಬಂಗಾರಪೇಟೆ 96

ಕೆಜಿಎಫ್ 88

ಮಾಲೂರು 141

ಮುಳಬಾಗಿಲು 127

ಶ್ರೀನಿವಾಸಪುರ 14

ಒಟ್ಟು 645

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net