ಕೊರೊನಾ ವೈರಸ್ ಪೀಡಿತ ಚೀನಾದಿಂದ ಇದುವರೆಗೆ 640 ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ಮಾಹಿತಿ ನೀಡಿದ ಕೇಂದ್ರ ಸರ್ಕಾರ

Coronavirs 24 Jan 20
Published on

ನವದೆಹಲಿ: ಕೊರೊನಾ ವೈರಸ್ ಪೀಡಿತ ಚೀನಾದಿಂದ ಇದುವರೆಗೆ 640 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆಯಿಸಿಕೊಳ್ಳಲಾಗಿದೆ. ಬೀಜಿಂಗ್ ನೆರವಿನೊಂದಿಗೆ ಈ ಸಂಕೀರ್ಣ ಕಾರ್ಯಾಚರಣೆ ನಡೆಸಲಾಗಿತ್ತು ಎಂಬುದನ್ನು ವಿದೇಶಾಂತ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ಹೇಳಿದ್ದಾರೆ.

ಇನ್ನೂ ಹತ್ತು ಭಾರತೀಯರು ಚೀನಾದಿಂದ ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಆರೋಗ್ಯ ತಪಾಸಣೆಯಲ್ಲಿ ಅವರು ಪಾಸ್ ಆಗಲು ಸಾಧ್ಯವಾಗಿಲ್ಲ. ಆದಾಗ್ಯೂ, ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲದೆ, ಅವರನ್ನು ವಾಪಸ್ ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದು ರವೀಶ್ ಕುಮಾರ್ ವಿವರಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಕಾರಣ ಚೀನಾದಲ್ಲಿ ಸಾಮಾನ್ಯ ವೀಸಾ ಮತ್ತು ಎಲ್ಲ ರೀತೀಯ ಇ-ವೀಸಾಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net