ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಪ್ರಮಾಣ ಪ್ರಕಟಿಸಿದ ಚುನಾವಣಾ ಆಯೋಗ; ಕಳೆದ ಬಾರಿಗಿಂತ ಕಡಿಮೆ

Election Commission of india
Published on

ನವದೆಹಲಿ: ನಿನ್ನೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಪ್ರಮಾಣವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಫೆ.8ರಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆದರೆ ಚುನಾವಣೆ ಮುಗಿದು ಎಕ್ಸಿಟ್​ ಪೋಲ್​ ಹೊರಬಿದ್ದರೂ ಎಷ್ಟು ಪ್ರಮಾಣದ ವೋಟಿಂಗ್​ ಆಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳವಳ ವ್ಯಕ್ತಪಡಿಸಿದ್ದರು. ನಿಜಕ್ಕೂ ನನಗೆ ಶಾಕ್​ ಆಗುತ್ತಿದೆ ಎಂದಿದ್ದರು.

ಇದೀಗ ಅಂಕಿಸಂಖ್ಯೆಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಒಟ್ಟಾರೆ ಶೇ.62.59ರಷ್ಟು ಮತದಾನ ಆಗಿದೆ ಎಂದು ಆಯೋಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2015ರ ಚುನಾವಣೆಯಲ್ಲಿ ಶೇ.67.47ರಷ್ಟು ಮತದಾನ ಆಗಿತ್ತು. ಅದಕ್ಕೆ ಹೋಲಿಸಿದರೆ ಕಡಿಮೆ ಆಗಲಿದೆ.

ಚುನಾವಣೆ ಮುಗಿದ ಬಳಿಕ ನಡೆದ ಎಕ್ಸಿಟ್​ ಪೋಲ್​ ಪ್ರಕಾರ ಆಮ್​ ಆದ್ಮಿ ಪಾರ್ಟಿಯೇ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳೇ ಬಿಜೆಪಿ ಪಾಲಿಗೆ ಮುಳ್ಳಾಗಲಿದೆ ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net