60 ಕಿಲೋಮೀಟರ್​​ ಬಿರುಕು ಬಿಟ್ಟ ಭೂಮಿ!; ಹೊಸ ಸಾಗರ ಸೃಷ್ಠಿ.. ವಿಜ್ಞಾನಿಗಳು ಹೇಳಿದ ಭಯಾನಕ ಭವಿಷ್ಯ ಹೀಗಿದೆ | Cracked Earth

dk - 2025-02-10T201049.000
Published on

Cracked Earth:ಆಫ್ರಿಕಾ ಖಂಡವೂ ವಿಚಿತ್ರ ಭೌಗೋಳಿಕ ಬದಲಾವಣೆಯ ಮೂಲಕ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೂರ್ವ ಆಫ್ರಿಕಾದಲ್ಲಿನ ಬಿರುಕು ಕಾರಣದಿಂದ ಖಂಡವನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ. ಅಲ್ಲದೆ, ಹೊಸದೊಂದು ಸಾಗರವನ್ನು ಸೃಷ್ಠಿಸುತ್ತದೆ ಎಂದು ವಿಜ್ಞಾನಿಗಳು ಇತ್ತೀಚಿಗೆ ಹೇಳಿದ್ದಾರೆ ಎಂದು ವರದಿಯೊಂದು ಹೇಳಿದೆ.

ಇದರ ಪರಿಣಾಮ, ಇದು ಆಫ್ರಿಕಾದ ಭೌಗೋಳಿಕತೆಯನ್ನು ಬದಲಾಯಿಸುವುದಲ್ಲದೆ, ಅದರ ಪರಿಸರ ವ್ಯವಸ್ಥೆ ಮತ್ತು ಅನೇಕ ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ.

ಪೂರ್ವ ಆಫ್ರಿಕಾದ ಬಿರುಕು ಭೂಮಿಯ ಮೇಲಿನ ಟೆಕ್ಟೋನಿಕ್ ಪ್ಲೇಟ್‌ಗಳ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ. ಈ ಬಿರುಕು ಕೆಂಪು ಸಮುದ್ರದಿಂದ ಮೊಜಾಂಬಿಕ್​ವರೆಗೆ 6,000 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ಆಫ್ರಿಕನ್ ಪ್ಲೇಟ್ ಮತ್ತು ಸೊಮಾಲಿ ಪ್ಲೇಟ್ ವರ್ಷಕ್ಕೆ ಸುಮಾರು 0.8 ಸೆಂಟಿಮೀಟರ್‌ಗಳಷ್ಟು ಅಂತರ ದೂರವಾಗುತ್ತಿವೆ. ಹೀಗಾಗಿ, ಇದು ಇದೇ ರೀತಿ ಸಾಗಿದರೆ ಮುಂದಿನ ದಿನಗಳಲ್ಲಿ ಹೊಸ ಸಾಗರ ಉದ್ಭವ ಆಗಲಿದೆ ಎಂದು ಹೇಳುತ್ತಿದ್ದಾರೆ.

ಇಥಿಯೋಪಿಯಾದ ಪ್ರದೇಶದಲ್ಲಿ ದೀರ್ಘ ಬಿರುಕು

2005ರಲ್ಲಿ ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿ ನೂರಾರು ಭೂಕಂಪಗಳ ಕಾರಣದಿಂದ 60 ಕಿಲೋಮೀಟರ್ ಉದ್ದದ ಬಿರುಕು ಉಂಟಾಗಿದೆ. ಇದರ ಕುರಿತು ಅಧ್ಯಯನ ಮಾಡಿದ್ದು, ಇದು ಆಫ್ರಿಕಾ ವೇಗವಾಗಿ ವಿಭಜನೆಯಾಗಬಹುದು ಎಂದು ವಿಜ್ಞಾನಿಗಳು ಸೂಚಿಸಲು ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net