

ಮಹಿಳೆಯೊಬ್ಬರು ಝೊಮ್ಯಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ತಲಾ 60 ರೂ. ಬೆಲೆಯ ಮೂರು ಪ್ಲೇಟ್ ದೂಧಿ ಥೆಪ್ಲಾ ಅನ್ನು ಆರ್ಡರ್ ಮಾಡಿದ್ದಾರೆ. ಆಕೆಗೆ ಕಂಟೇನರ್ ಶುಲ್ಕವೂ 60 ರೂ. ವಿಧಿಸಲಾಗಿದೆ. ಝೊಮ್ಯಾಟೋ ಕಂಪನಿ ಇತ್ತೀಚೆಗೆ ತ್ರೈಮಾಸಿಕದಲ್ಲಿ 2 ಕೋಟಿ ರೂ. ಲಾಭ ಮಾಡಿರುವ ಬಗ್ಗೆ ವರದಿಯಾಗಿತ್ತು. ಇದು ಝೊಮ್ಯಾಟೋ ನಂತಹ ಫುಡ್ ಡೆಲಿವರಿ ಅಪ್ಲಿಕೇಷನ್‌ಗಳ ಜನಪ್ರಿಯತೆಗೆ ಸಾಕ್ಷಿಯಾಗುತ್ತಿದೆ. ಆದರೆ, ಇತ್ತೀಚೆಗೆ ಇದೇ ಪ್ಲಾಟ್‌ಫಾರ್ಮ್ ಮೂಲಕ ಆಹಾರ ಮಾಡಿದ ಮಹಿಳೆಯೊಬ್ಬರು ಕಂಟೇನರ್ ಚಾರ್ಜ್‌ಗೆ ವಿಧಿಸಿರುವ ಶುಲ್ಕದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬರು ಝೊಮ್ಯಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ತಲಾ 60 ರೂ. ಬೆಲೆಯ ಮೂರು ಪ್ಲೇಟ್ ದೂಧಿ ಥೆಪ್ಲಾ ಅನ್ನು ಆರ್ಡರ್ ಮಾಡಿದ್ದಾರೆ. ಬಳಿಕ, ಆಕೆ ತಮ್ಮ ಆರ್ಡರ್ ಅನ್ನು ಪಡೆದುಕೊಂಡು ಬಿಲ್ ಅನ್ನು ಪರಿಶೀಲಿಸಿದಾಗ, ಆರ್ಡರ್‌ಗೆ ವಿಧಿಸಿದ ಕಂಟೇನರ್ ಶುಲ್ಕ ಕಂಡು ಶಾಕ್ ಆಗಿದ್ದಾರೆ.
ಬೇಸರಗೊಂಡ ಮಹಿಳೆ, ಈ ಬಗ್ಗೆ X ನಲ್ಲಿ ಟ್ವೀಟ್ ಮಾಡಿ ಝೊಮ್ಯಾಟೋಗೂ ಟ್ಯಾಗ್ ಮಾಡಿದ್ದಾಳೆ. "ಕಂಟೇನರ್ ಶುಲ್ಕವು ನಾನು ಆರ್ಡರ್ ಮಾಡಿರುವ 60 ರೂ. ಐಟಂಗೆ ಸಮಾನವಾಗಿದೆ. ಸೀರಿಯಸ್ಲೀ? ಎಂದು ಖುಷ್ಬೂ ಥಕ್ಕರ್ ಟ್ವೀಟ್ ಮಾಡಿದ್ದು, ಜತೆಗೆ ಆಕೆಗೆ ಬಂದ ಬಿಲ್‌ನ ಫೋಟೋವನ್ನೂ ಸಹ ತನ್ನ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾಳೆ.
ಇನ್ನು, ಮಹಿಳೆಯ ಟ್ವೀಟ್ ವೈರಲ್ ಆಗಿದ್ದು, ಇದಕ್ಕೆ ಝೊಮ್ಯಾಟೋ ಸಹ ಪ್ರತಿಕ್ರಿಯೆ ನೀಡಿದೆ. “ಹಾಯ್ ಖುಷ್ಬೂ, ತೆರಿಗೆಗಳು ಸಾರ್ವತ್ರಿಕವಾಗಿವೆ ಮತ್ತು ಆಹಾರದ ಪ್ರಕಾರವನ್ನು ಅವಲಂಬಿಸಿ ಶೇಕಡಾ 5 ರಿಂದ 18 ರವರೆಗೆ ಬದಲಾಗುತ್ತದೆ. ಪ್ಯಾಕೇಜಿಂಗ್ ಶುಲ್ಕಗಳನ್ನು ನಮ್ಮ ರೆಸ್ಟೋರೆಂಟ್ ಪಾಲುದಾರರು ವಿಧಿಸುತ್ತಾರೆ, ಅವರೇ ಈ ಅಭ್ಯಾಸವನ್ನು ಜಾರಿಗೊಳಿಸುತ್ತಾರೆ ಮತ್ತು ಗಳಿಸುತ್ತಾರೆ’’ ಎಂದು ಟ್ವೀಟ್ ಮಾಡಿದೆ.
ಇದಕ್ಕೆ ಉತ್ತರಿಸಿದ ಖುಷ್ಬೂ ಥಕ್ಕರ್, “ನನಗೆ 60 ರೂ. ಕಂಟೇನರ್ ಚಾರ್ಜ್ ವಿಪರೀತ ಮತ್ತು ಅನ್ಯಾಯವಾಗಿದೆ ಎನಿಸಿತು ಎಂದು ಬರೆದಿದ್ದಾರೆ. ಗ್ರಾಹಕರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಕಂಟೇನರ್‌ಗಳನ್ನು ಒದಗಿಸುವುದು ರೆಸ್ಟೋರೆಂಟ್‌ನ ಜವಾಬ್ದಾರಿಯಲ್ಲವೇ?’’ ಎಂದೂ ಟ್ವೀಟ್ ಮಾಡಿದ್ದಾರೆ.