ಚೆಕ್ಕೇರ ನಮ್ಮೆಯಲ್ಲಿ 6 ತಂಡ ಮುಂದಿನ ಹಂತಕ್ಕೆ

15 gkp .1
ಪಂದ್ಯದ ಒಂದು ದೃಶ್ಯ
Published on

ಗೋಣಿಕೊಪ್ಪಲು : ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 6 ತಂಡಗಳು ಮುನ್ನಡೆ ಪಡೆದುಕೊಂಡಿವೆ.

ಅಳಮೇಂಗಡ ಮತ್ತು ಕರೋಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಳಮೇಂಗಡ ತಂಡ ನಿಗದಿತ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 44ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರೋಟಿರ ತಂಡ 2ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪಾರುವಂಡ ಮತ್ತು ಕಳಕಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರುವಂಡ ತಂಡ ನಿಗದಿತ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತು. ಕಳಕಂಡ ತಂಡ 8 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿತು. ಕುಪ್ಪಣಮಾಡ ಮತ್ತು ಅದೇಂಗಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕುಪ್ಪಣಮಾಡ ತಂಡ ನಿಗದಿತ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು. ಅದೇಂಗಡ ತಂಡ 4 ವಿಕೆಟ್ ನಷ್ಟಕ್ಕೆ 50 ರನ್ ಅಷ್ಟೇ ಗಳಿಸಿತು.

ಮಣವಟ್ಟಿರ ಮತ್ತು ಮುಕ್ಕಾಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಣವಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಮುಕ್ಕಾಟಿರ ತಂಡ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಬೊಟ್ಟಂಗಡ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬೊಟ್ಟಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಕಾಣತಂಡ ತಂಡ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅಮ್ಮಾಟಂಡ ಮತ್ತು ಓಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮಾತಂಡ ತಂಡ ನಿಗದಿತ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತು. ಓಡಿಯಂಡ ತಂಡ 4 ವಿಕೆಟ್ ನಷ್ಟಕ್ಕೆ 54 ರನ್ ಅಷ್ಟೇ ಗಳಿಸಿತು.

ಇಂದಿನ ಪುರುಷರ ಪಂದ್ಯಗಳು

8 ಗಂಟೆಗೆ ಪಂದ್ಯಂಡ - ಅಲ್ಲಂಗಡ

9 ಗಂಟೆಗೆ ಅಚ್ಚಪಂಡ - ಮಚ್ಚ ಮಡ

10 ಗಂಟೆಗೆ ಚೊಟ್ಟಂಗಡ - ಮೂಕೊಂಡ

11 ಗಂಟೆಗೆ ಮಾಳೆಟಿರ (ಕೆದ ಮುಳ್ಳುರ್) -ಆಟ್ರಂಗಡ

12 ಗಂಟೆಗೆ ಚೆಕ್ಕೆಟಿಜಜಿಟಿಜರ - (ಪಂದ್ಯಂಡ ಅಲ್ಲಂಗಡ ಗೆದ್ದ ತಂಡದೊಟ್ಟಿಗೆ)

1 ಗಂಟೆಗೆ ಪರುವಂಡ - ಕುಪ್ಪಣ ಮಡ

2 ಗಂಟೆಗೆ ಮುಕ್ಕಾಟಿರ (ಹರಿಹರ) - ಚಿಮ್ಮಣ್ಣಮಡ

3 ಗಂಟೆಗೆ ಸಣ್ಣುವಂಡ - (ಚೂಟ್ಟಂಗಡ ಮೂಕೊಂಡ ಗೆದ್ದ ತಂಡದೊಟ್ಟಿಗೆ)

ಮಹಿಳೆಯರ ಕ್ವಾಟರ್ ಫೈನಲ್ಸ್

10 ಗಂಟೆಗೆ ಪಾಸುರ -ಅರಮಣಮಡ

11 ಗಂಟೆಗೆ ಮುಕ್ಕಾಟಿರ (ಹರಿಹರ) - ಚೆನಂಡ

12 ಗಂಟೆಗೆ ಮಾಳೆಟಿಜಜಿಟಿಜಟಿರ (ಕೆದಮುಳ್ಳೂರ್) - ಚೆಕ್ಕೇರ

1 ಗಂಟೆಗೆ ಓಡಿಯಂಡ - ಮಣವಟ್ಟಿರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net