ವೇಶ್ಯಾವಾಟಿಕೆ ನಡೆಸುತ್ತಿದ್ದ 6 ಜನರ ಬಂಧನ; 4000 ಕಾಂಡಮ್​ಗಳು ವಶ! | Prostitution

dk-2025-03-19t193619033-67dacf6ed1ca4
Published on

Prostitution : ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಒಬ್ಬ ಮಹಿಳೆ ಸೇರಿದಂತೆ 6 ಜನರುಳ್ಳ ಗ್ಯಾಂಗ್​ ಅನ್ನು ಬಂಧಿಸುವುದರ ಜತೆ ಅವರಿಂದ ಬರೊಬ್ಬರಿ 4 ಸಾವಿರ ಕಾಂಡಮ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ವಾರಂಗಲ್​​ ಜಿಲ್ಲೆಯ ದಮೇರಾ ಮಂಡಲದ ಲಿಯಾಡೆಲ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಮುಖ ಆರೋಪಿ ಮುಸ್ಕು ಲತಾ, 19 ವರ್ಷದ ಯುವತಿ ಸೇರಿ ಆಕೆಯ ಸಹಚರ ಅಬ್ದುಲ್ ಅಫ್ನಾನ್, ಶೇಖ್ ಸೈಲಾನಿ ಬಾಬಾ, ಮೊಹಮ್ಮದ್ ಅಲ್ತಾಫ್ ಮತ್ತು ವಾದೂದ್ ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳಿ ತಿಳಿಸಿದ್ದಾರೆ.

ಹುಡುಗಿಯರ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸಿಕೊಂಡು ಹುಡುಗಿಯರನ್ನು ಬಲೆಗೆ ಬೀಳಿಸುವುದು, ನಂತರ ಹುಡುಗಿಯರಿಗೆ ಮಾದಕ ದ್ರವ್ಯ ನೀಡಿ ಲೈಂಗಿಕ ಕೆಲಸಕ್ಕೆ ಒತ್ತಾಯಿಸುವುದು ಈ ಗ್ಯಾಂಗ್‌ನ ಗುರಿಯಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ವಾರಂಗಲ್​ ಕಮಿಷರ್ನೇಟ್​ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಹುಡುಗಿ ಹುಡುಕಾಟದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ನಾಪತ್ತೆಯಾದ ಹುಡುಗಿ ಇದೇ ತಂಡದಲ್ಲಿ ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net