ಶಾಪಿಂಗ್ ಮಾಲ್​ನಲ್ಲಿ ಚಾಕುವಿನಿಂದ ಇರಿದು 6 ಜನರ ಬರ್ಬರ ಹತ್ಯೆ! ಆರೋಪಿಗೆ ಸ್ಥಳದಲ್ಲೇ ಗುಂಡೇಟು

as
Published on

ಸಿಡ್ನಿ: ಶಾಪಿಂಗ್ ಮಾಲ್​ನಲ್ಲಿ ವ್ಯಕ್ತಿಯೊಬ್ಬ ಜನರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು ಘಟನೆಯಲ್ಲಿ ಆರು ಜನರು ಮೃತಪಟ್ಟಿದ್ದು, ಮಗು ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಬೋಂಡಿ ಜಂಕ್ಷನ್​ನಲ್ಲಿರುವ ವೆಸ್ಟ್‌ಫೀಲ್ಡ್ ಶಾಪಿಂಗ್​ ಮಾಲ್​ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ.

ಮಾಲ್​ನಲ್ಲಿ ಶಾಪಿಂಗ್ ಮಾಡುತ್ತಿದ್ದ ಹಲವಾರು ಜನರ ಮೇಲೆ ದಾಳಿಕೋರ ಏಕಾಏಕಿ ಚಾಕುವಿನಿಂದ ತೀವ್ರ ಹಲ್ಲೆ ನಡೆಸಿದ್ದಾನೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಸ್ಥಳದಿಂದ ಹೊರಗಡೆ ಕಳುಹಿಸಿದ್ದಾರೆ. ನಂತರ ಹಿರಿಯ ಪೊಲೀಸ್​ ಅಧಿಕಾರಿ ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಮಗು ಸೇರಿ ಹಲವು ಗಾಯಗೊಂಡಿದ್ದು ಅವರನ್ನು ಸಿಡ್ನಿಯಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಆಂಬ್ಯುಲೆನ್ಸ್ ವಕ್ತಾರರು ಎಎಫ್‌ಪಿಗೆ ತಿಳಿಸಿದರು.

ಆಸ್ಟ್ರೇಲಿಯನ್ ರಗ್ಬಿ ಲೀಗ್ ಜರ್ಸಿಯನ್ನು ಧರಿಸಿದ ದಾಳಿಕೋರ ಚಾಕುವಿನಿಂದ ಶಾಪಿಂಗ್ ಮಾಲ್​ ಸುತ್ತ ಓಡಾಡುತ್ತಿರುವುದು ಜೊತೆಗೆ ಈತನ ದಾಳಿಯಲ್ಲಿ ಮೃತಪಟ್ಟ ಶವಗಳು, ಗಾಯಗೊಂಡಿರುವರು ಜನರು ನೆಲದ ಮೇಲೆ ನಿರ್ಜೀವವಾಗಿ ಮಲಗಿರುವುದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಈ ಘಟನೆಗೆ ನಿಖರ ಕಾರಣ ಏನು ಎಂಬುದನ್ನು ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net