

ತಿರುವನಂಪುರಂ: ಕೇರಳದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ದಿಂದ ಸುರಿಯುತ್ತಿರುವ ವರ್ಷಧಾರೆಗೆ ಕನಿಷ್ಠ 6 ಜನರು ಬಲಿಯಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಕೊಟ್ಟಿಕಲ್ ಪಂಚಾಯತ್ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿ 13 ಜನರು ನಾಪತ್ತೆಯಾಗಿದ್ದರು. ಅವರಲ್ಲಿ ಮೂವರ ಶವ ಸಿಕ್ಕಿದೆ. ತೋಡುಪುಳದಲ್ಲಿ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿ ಒಬ್ಬ ಬಾಲಕಿ ಬಲಿಯಾಗಿದ್ದಾಳೆ. ಭೂಕುಸಿತ ಸಂಭವಿಸಿದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೌಕಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಮಳೆಯಿಂದಾದ ಅವಾಂತರಗಳ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿವೆ. ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ ಮತ್ತು ತ್ರಿಶೂರು ರೆಡ್ ಅಲರ್ಟ್ ಘೋಷಣೆಯಾದ ಜಿಲ್ಲೆಗಳು.
ಸೇನೆ ನೆರವು ಕೋರಿಕೆ
ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂ ಕುಸಿತವಾಗಿದ್ದು ಸಂತ್ರಸ್ತರ ರಕ್ಷಣೆಗಾಗಿ ರಾಜ್ಯ ಸರ್ಕಾರ ಭೂ ಸೇನೆ ಮತ್ತು ವಾಯು ಪಡೆಯ ನೆರವನ್ನು ಕೋರಿದೆ. ಈ ಎರಡೂ ಜಿಲ್ಲೆಗಳ ಗಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತವಾಗಿ ಕೆಲವು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೂ ಸೇನೆಯ ಸಿಬ್ಬಂದಿಯನ್ನು ಆಗಲೇ ನಿಯೋಜಿಸಲಾಗಿದೆ. ಒಂದು ತುಕಡಿಯ ಒಬ್ಬರು ಅಧಿಕಾರಿ, ಇಬ್ಬರು ಜೆಸಿಒಗಳು ಮತ್ತು ಸೇನೆಯ 30 ಸಿಬ್ಬಂದಿ ಕೊಟ್ಟಾಯಯಂ ಜಿಲ್ಲೆಯ ಕಂಜಿರಪಲ್ಲಿಗೆ ತೆರಳಿದ್ದಾರೆ.
ಯೆಲ್ಲೋ ಅಲರ್ಟ್ ಜಿಲ್ಲೆಗಳು
ತಿರುವನಂತಪುರಂ, ಕೊಲ್ಲಂ, ಆಳಪು್ಪಳ, ಪಾಲಕ್ಕಾಡ್, ಮಲಪು್ಪರಂ, ಕೋಳಿಕೋಡ್ ಮತ್ತು ವಯನಾಡ್. ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾ ಗಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ತಿಳಿಸಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡದಿಂದಾಗಿ ಭಾನುವಾರದವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣ ಹಾಗೂ ಕೆಲವೆಡೆ ತೀವ್ರ ಮಳೆಯಾಗಲಿದೆ.
ಅಣೆಕಟ್ಟೆಗಳಿಗೆ ರೆಡ್ ಅಲರ್ಟ್
ಪಟ್ಟಣಂತಿಟ್ಟದ ಕಕ್ಕಿ ಅಣೆಕಟ್ಟು, ತ್ರಿಶೂರಿನ ಶೋಲಯಾರ್ ಡ್ಯಾಂ, ಇಡುಕ್ಕಿಯ ಕುಂಡಾಲ ಮತ್ತು ಕಲ್ಲರ್ಕುಟ್ಟಿ ಅಣೆಕಟ್ಟುಗಳಿಗೆ ರೆಡ್ ಅಲರ್ಟ್ ಘೋಷಿಸಿರು ವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಹೆಲಿಕಾಪ್ಟರ್ ಸನ್ನದ್ಧ
ಕೇರಳದಲ್ಲಿರುವ ಭೂ ಸೇನೆ ಹಾಗೂ ವಾಯುಪಡೆಯ ಸಿಬ್ಬಂದಿಯನ್ನು ಪರಿಹಾರ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಕಾರ್ಯಾ ಚರಣೆಗಾಗಿ ಎಂಐ-17 ಮತ್ತು ಸಾರಂಗ್ ಹೆಲಿ ಕಾಪ್ಟರ್ಗಳು ಸಿದ್ಧ ವಾಗಿ ನಿಂತಿವೆ. ಕೇರಳದ ಸದ್ಯದ ಹವಾಮಾನ ಪರಿಸ್ಥಿತಿ ಹಿನ್ನೆಲೆ ಯಲ್ಲಿ ದಕ್ಷಿಣ ಏರ್ ಕಮಾಂಡ್ನ ಎಲ್ಲ ಬೇಸ್ಗಳನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದೆ ಎಂದು ಅದು ರಕ್ಷಣಾ ಇಲಾಖೆ ತಿಳಿಸಿದೆ.
ಬಸ್ನಲ್ಲಿ ಸಿಲುಕಿದ ಪ್ರಯಾಣಿಕರು
ಜಲಾವೃತ ರಸ್ತೆಯಲ್ಲಿ ಸಿಲುಕಿ ಕೊಂಡಿರುವ ಬಸ್ನೊಳಗೆ ಸಿಲುಕಿದ್ದ ಜನರು ಹೊರಗೆ ಬರಲು ಪರದಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಕೊಟ್ಟಾಯಂನಲ್ಲಿ ನೀರಿನಲ್ಲಿ ಸಿಲುಕಿರುವ ಕಾರನ್ನು ಹೊರತರಲು ಸ್ಥಳೀಯರು ಪ್ರಯತ್ನಿಸುತ್ತಿರುವ ದೃಶ್ಯವೂ ವೈರಲ್ ಆಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.