ಬಾಲಿವುಡ್​ ಇಂಡಸ್ಟ್ರಿಯನ್ನೇ ನಡುಗಿಸಿದ ಟಾಪ್​ 6 ಸೆಕ್ಸ್​ ಸ್ಕ್ಯಾಂಡಲ್​ಗಳು ಯಾವವು ಗೊತ್ತಾ?

bolly (1)
Published on

ಸಿನಿಮಾ ಕ್ಷೇತ್ರ ಮತ್ತು ಮಾಡೆಲಿಂಗ್​ ಕ್ಷೇತ್ರದಲ್ಲಿ ಮೈಮಾಟಕ್ಕೆ ಹೆಚ್ಚಿನ ಬೆಲೆ. ಅಂದ ಚೆಂದಕ್ಕೇ ಅಲ್ಲಿ ತೂಕ ಜಾಸ್ತಿ. ಪ್ರತಿಭೆಗೆ ಏನಿದ್ದರೂ ಎರಡನೇ ಸ್ಥಾನ. ಆಗಾಗ ಅಂಥ ಪ್ರಕರಣಗಳು ಸುದ್ದಿ ಮಾಡುತ್ತಲೇ ಇರುತ್ತವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಲೇ ಇರುತ್ತದೆ. ಆಗಾಗ ಅಂಥ ಕಾಮಕಾಂಡಗಳು ದೊಡ್ಡವರ ಬುಡಕ್ಕೆ ಬಂದಿದ್ದೂ ಉಂಟು. ಮುಜುಗರಕ್ಕೀಡಾದ ಘಟನೆಯೂ ನಡೆದ ಉದಾಹರಣೆಗಳಿವೆ. ಅಂಥಹ ಒಂದಷ್ಟು ಸೆಕ್ಸ್ ಸ್ಕ್ಯಾಂಡಲ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

1. ಗ್ಯಾಂಗ್​ಸ್ಟರ್ ಸಿನಿಮಾ ಖ್ಯಾತಿಯ ಶೈನಿ ಅಹುಜಾ, 2009ರಲ್ಲಿ ಮನೆ ಕೆಲಸದವಳನ್ನೇ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಆರೋಪಿ ಶೈನಿಗೆ ಬರೋಬ್ಬರಿ ಏಳು ವರ್ಷ ಶಿಕ್ಷೆ ವಿಧಿಸಿತ್ತು ಕೋರ್ಟ್​. ಈ ಪ್ರಕರಣ ನಡೆದ ಬಳಿಕ ಸಿನಿಮಾಗಳಿಂದ ಅವಕಾಶ ಕಳೆದಿಕೊಂಡಿದ್ದ ಶೈನಿ, ವೆಲ್​ಕಮ್​ ಬ್ಯಾಕ್​ ಚಿತ್ರದ ಮೂಲಕ ಕಮ್​ಬ್ಯಾಕ್​ ಮಾಡಿದ್ದರು.

2. 2011ರಲ್ಲಿ ಬಾಲಿವುಡ್​ ನಟಿ ಬಿಪಾಶಾ ಬಸು, ರಾಜಕಾರಣಿ ಅಮರ್​ ಸಿಂಗ್​ ಜತೆ ಸೆಕ್ಸ್ ಸಂಭಾಷಣೆ ನಡೆಸಿದ್ದರು ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ಆ ಆಡಿಯೋ ಟೇಪ್​ ಎಲ್ಲೆಡೆ ಹರಿದಾಡಿ ಕಾಂಟ್ರವರ್ಸಿ ಸೃಷ್ಟಿಸಿತ್ತು. ಆದರೆ, ಆ ಆಡಿಯೋ ಟೇಪ್​ನಲ್ಲಿನ ಧ್ವನಿ ನನ್ನದಲ್ಲ ಎಂದು ಬಿಪಾಶಾ ವಾದಿಸಿದ್ದರು.


3. ಬಾಲಿವುಡ್​ ಮತ್ತು ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಅಮನ್​ ವರ್ಮಾ ನೇರವಾಗಿ ನಟಿಗೆ ಸೆಕ್ಸ್​ಗೆ ಆಹ್ವಾನಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ನವ ನಟಿಗೆ ಸಿನಿಮಾ ಅವಕಾಶ ಕೊಡಿಸುವ ಬಗ್ಗೆ ಹೇಳಿ ಪಲ್ಲಂಗಕ್ಕೆ ಕರೆದಿದ್ದ. ಆ ವಿಡಿಯೋ ಎಲ್ಲೆಡೆ ಹರಿದಾಡಿ ಅಮನ್​ ವಿರುದ್ಧ ದೂರು ಸಹ ದಾಖಲಾಗಿತ್ತು.


4. 2014ರಲ್ಲಿ ಟಾಲಿವುಡ್​ನಲ್ಲಿ ವೇಶ್ಯಾವಾಟಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಟಿ ಶ್ವೇತಾ ಬಸು ಈ ಪ್ರಕರಣದ ಕಿಂಗ್​ ಪಿನ್​ ಎಂದು ಹೇಳಲಾಗಿತ್ತು. ಆದರೆ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದರು. ಬಳಿಕ ಹೈದರಾಬಾದ್​ ಸೆಷನ್​ ಕೋರ್ಟ್​ ಪ್ರಕರಣವನ್ನು ವಾಪಾಸ್​ ಪಡೆದುಕೊಂಡಿತ್ತು.


5. ಕರೀನಾ ಕಪೂರ್​ ಮತ್ತು ಶಾಹೀದ್​ ಕಪೂರ್ ಒಂದು ಕಾಲದ ಪ್ರೇಮ ಪಕ್ಷಿಗಳು. ಇದೇ ಜೋಡಿಯ ಕಿಸ್ಸಿಂಗ್​ ಎಂಎಂಎಸ್​ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪರಸ್ಪರ ಕಿಸ್ಸಿಂಗ್​ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಆದರೆ, ಅದ್ಯಾವುದನ್ನೂ ಲೆಕ್ಕಿಸದ ಈ ಜೋಡಿ ತಮ್ಮ ಪಾಡಿಗೆ ಕೆಲಸದಲ್ಲಿ ಮುಂದುವರಿದಿತ್ತು. ಹೀಗಿರುವಾಗಲೇ 2007ರಲ್ಲಿ ಬೇರೆ ಬೇರೆಯಾಗಿ ಮತ್ತೆ ಸುದ್ದಿ ಮಾಡಿದ್ದರು.

6. ಬಾಲಿವುಡ್ ನಟಿ ರಾಧಿಕಾ ಆಪ್ಟೆ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ. ಅಷ್ಟೇ ಅಲ್ಲ ಅವರ ಅಂಥ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿವೆ. ಯಾರೋ ಒಬ್ಬ ವ್ಯಕ್ತಿಗೆ ತನ್ನ ಖಾಸಗಿ ಅಂಗಾಂಗಳನ್ನು ಪ್ರದರ್ಶಿಸುತ್ತಿರುವ ಎಂಎಂಎಸ್​ ವಿಡಿಯೋ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಆ ವಿಡಿಯೋ ನೋಡಿ, ಸದು ಕಿರುಚಿತ್ರವೊಂದರ ದೃಶ್ಯ ಎಂದು ಆರೋಪವನ್ನು ಅಲ್ಲಗೆಳೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net