ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ; 800 ಸಾವು, 2500 ಕ್ಕೂ ಹೆಚ್ಚು ಜನರಿಗೆ ಗಾಯ| earthquake

afghanistan
Published on

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ, ಕನಿಷ್ಠ 800 ಜನರು ಸಾವನ್ನಪ್ಪಿದ್ದು, 2500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬಲವಾದ ಕಂಪನದಿಂದ ಉಂಟಾದ ವಿನಾಶ ಮತ್ತು ಅವಶೇಷಗಳ ಅಡಿಯಲ್ಲಿ ಕಾಣೆಯಾದವರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಭಾನುವಾರ (ಆ.31) ತಡರಾತ್ರಿ ಸಂಭವಿಸಿದ ಭೂಕಂಪವು ನೆರೆಯ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಬಳಿಯ ಕುನಾರ್ ಪ್ರಾಂತ್ಯದ ಹಲವಾರು ಪಟ್ಟಣಗಳನ್ನು ಅಪ್ಪಳಿಸಿದೆ. ರಾತ್ರಿ 11:47 ಕ್ಕೆ 6.0 ತೀವ್ರತೆಯ ಭೂಕಂಪವು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಪೂರ್ವ-ಈಶಾನ್ಯಕ್ಕೆ 27 ಕಿಲೋಮೀಟರ್ ಕೇಂದ್ರೀಕೃತವಾಗಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಕುನಾರ್ ಪ್ರಾಂತ್ಯದ ನೂರ್ ಗಲ್, ಸಾವ್ಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪನದಿಂದ ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದುವು 34.50°N ಅಕ್ಷಾಂಶ ಮತ್ತು 70.81°E ರೇಖಾಂಶದಲ್ಲಿ, 160 ಕಿಲೋ ಮೀಟರ್‌ ಆಳದಲ್ಲಿ ಇದೆ.

ಜಲಾಲಾಬಾದ್ ಒಂದು ಜನನಿಬಿಡ ವ್ಯಾಪಾರ ನಗರವಾಗಿದೆ. ಪುರಸಭೆಯ ಪ್ರಕಾರ ಇದು ಸುಮಾರು 300,000 ಜನಸಂಖ್ಯೆಯನ್ನು ಹೊಂದಿದ್ದು, ಈ ಪ್ರದೇಶವು ತುಂಬಾ ದೊಡ್ಡದಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ಕಟ್ಟಡಗಳನ್ನು ಮಣ್ಣಿನ ಇಟ್ಟಿಗೆಗಳು, ಮರ, ಕಾಂಕ್ರೀಟ್ ಮತ್ತು ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net