

Earthquake : ಟರ್ಕಿಯ ಅತ್ಯಂತ ಜನಬೀಡ ಪ್ರದೇಶವಾದ ಇಸ್ತಾನ್ ಬುಲ್ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆ 6.2 ತೀವ್ರತೆಯ ಭೂಕಂಪನವಾಗಿದೆ. ಬೃಹತ್ ಕಟ್ಟಗಳು ನಡುಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆಯು ಭೂಕಂಪವು 10 ಕಿಲೋಮೀಟರ್ ಆಳದಲ್ಲಿ 6.2 ತೀವ್ರತೆಯನ್ನು ಹೊಂದಿದ್ದು, ಇದರ ಕೇಂದ್ರಬಿಂದು ಮರ್ಮರ ಸಮುದ್ರದಲ್ಲಿ ಇಸ್ತಾನ್‌ಬುಲ್‌ನ ನೈಋತ್ಯಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿದೆ ಎಂದು ವರದಿ ಮಾಡಿದೆ.
ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಆದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಂಡ ದೃಶ್ಯಗಳಲ್ಲಿ ನಿವಾಸಿಗಳು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಓಡುತ್ತಿರುವುದನ್ನು ತೋರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.(ಏಜೆನ್ಸೀಸ್)