ಸಾಸಲು ದೇಗುಲದ ಹುಂಡಿಯಲ್ಲಿ 6.10ಲಕ್ಷ ರೂ. ಸಂಗ್ರಹ

04-kkr,1(1-25
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಹುಂಡಿ ಎಣಿಕೆ ಕಾರ್ಯಕ್ರಮ ಉಪತಹಸೀಲ್ದಾರ್ ವೀಣಾ ನೇತೃತ್ವದಲ್ಲಿ ಶನಿವಾರ ನೆರವೇರಿತು. ನರೇಂದ್ರ, ಪ್ರಸನ್ನ, ಸೋಮಾಚಾರ್ ಮತ್ತಿತರರಿದ್ದರು.
Published on

ಕಿಕ್ಕೇರಿ : ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ ಮುಜರಾಯಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ನಡೆಯಿತು.

ಕಾರ್ತಿಕ ಮಾಸದ ತರುವಾಯ ಒಂದು ತಿಂಗಳ ನಂತರ ಭಕ್ತರು ಹರಕೆ ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಹಾಕಲಾಗಿದ್ದ ಕಾಣಿಕೆಯನ್ನು ಕಿಕ್ಕೇರಿ ಪೊಲೀಸರ ಸರ್ಪಗಾವಲಿನಲ್ಲಿ ಎಣಿಕೆ ಮಾಡಲಾಯಿತು. ತಹಸೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ನಾಡಕಚೇರಿ ಉಪ ತಹಸೀಲ್ದಾರ್ ವೀಣಾ ನೇತೃತ್ವದಲ್ಲಿ ಎಣಿಕೆ ಕಾರ್ಯಕ್ರಮ ಜರುಗಿತು.

ಮುಜರಾಯಿ ಇಲಾಖೆ ಸ್ವಾಮ್ಯದ ದೇಗುಲದ ಹುಂಡಿ ಎಣಿಕೆ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು. ಹುಂಡಿಯಲ್ಲಿ ಒಟ್ಟು 6,10,275ರೂ. ಸಂಗ್ರಹವಾಗಿತ್ತು. ದೇಗುಲ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮೂಲ ದೇವರಿಗೆ ಬಾಲಾಲಯ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದು, ಸುರಕ್ಷತೆ ದೃಷ್ಟಿಯಲ್ಲಿ ದೇಗುಲದ ಹುಂಡಿ ಎಣಿಕೆ ಅಗಿಂದಾಗ್ಗೆ ನಡೆಸಲಾಗುತ್ತಿದೆ ಎಂದು ಉಪ ತಹಸೀಲ್ದಾರ್ ವೀಣಾ ತಿಳಿಸಿದರು. ಕಾಣಿಕೆ ಹಣವನ್ನು ಕೆ.ಆರ್.ಪೇಟೆಯ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಅಕೌಂಟ್‌ಗೆ ಜಮಾ ಮಾಡಲಾಯಿತು.

ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಆಡಳಿತಾಧಿಕಾರಿಗಳಾದ ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನಿಲ್ ಗಾಣಿಗೇರ, ಹರ್ಷಿತಾ, ವನಜಾಕ್ಷಿ, ಬ್ಯಾಂಕ್ ಆಫ್ ಬರೋಡ ಪ್ರಕಾಶ್, ಗ್ರಾಮ ಸಹಾಯಕರು, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net