ಇಂದು 56ನೇ ಜಿಎಸ್​ಟಿ ಕೌನ್ಸಿಲ್​ ಸಭೆ: ಭಾರಿ ಬದಲಾವಣೆ ನಿರೀಕ್ಷೆ, ಜನ ಸಾಮಾನ್ಯರಲ್ಲಿ ಮೂಡಿದೆ ಭರವಸೆ!| GST

untitled-design-2025-09-03t114112443-68b7dc0b111fd
Published on

GST : ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು (ಸೆಪ್ಟೆಂಬರ್​​ 3) ಬೆಳಿಗ್ಗೆ 11 ಗಂಟೆ ಸುಮಾರಿಗೆ ಜಿಎಸ್​ಟಿ ಸಭೆ ನಡೆಯಲಿದೆ ಎಂದು ಮಂಡಳಿಯು ತಿಳಿಸಿದೆ. ಇನ್ನು ಈ ಸಭೆ ಎರಡು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್​ 4ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ಸರ್ಕಾರ ಯಾವ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಸಭೆಯ ಮುಗಿದ ನಂತರ ಪ್ರಕಟಿಸಲಿದೆ.

ಸಭೆಯಲ್ಲಿ ಯಾರಿರುತ್ತಾರೆ?

ಈ ಜಿಎಸ್​​ಟಿ ಮಂಡಳಿಯ 56 ನೇ ಸಭೆಯಾಗಿದೆ. ಇದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನೇತೃತ್ವ ವಹಿಸಲಿದ್ದಾರೆ. ಹಾಗೇ ಒಟ್ಟು 33 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಇವರಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಸಭೆ ನಂತರ ಏನು ಬದಲಾವಣೆಯಾಗಬಹುದು?

ಸರ್ಕಾರವು ಜಿಎಸ್​ಟಿ ತೆರಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೇ ಪ್ರತಿನಿತ್ಯ ಬಳಸುವ ಹಾಲಿನ ಉತ್ಪನ್ನಗಳು, ಶಾಂಪೂ ಹಾಗೂ ಟೂತ್​ಪೇಸ್ಟ್​ನಂತಹ ವಸ್ತುಗಳು ಅಗ್ಗವಾಗಬಹದು. ಈ ವಸ್ತುಗಳಲ್ಲಿ ಶೇ. 5 ರಷ್ಟು ಜಿಎಸ್​ಟಿ ಸ್ಲಾಬ್​ಗೆ ಸ್ಥಳಾಂತರಿಸಬಹುದು ಎಂಬ ನಿರೀಕ್ಷೆ ಇದೆ.

ಸರ್ಕಾರವು ಶೇ. 12 ಮತ್ತು ಶೇ. 18 ರ ಜಿಎಸ್​ಟಿ ಸ್ಲಾಬ್​ಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಇದು ಸರಳ ಮತ್ತು ಕಡಿಮೆ ತೆರಿಒಗೆಗಳಿಗೆ ಕಾರಣವಾಗಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net